GOLD RATE:
ಅಕ್ಷಯ ತೃತೀಯ ಬಂತು. ಅಂದು ಒಂದು ಗ್ರಾಂ ಚಿನ್ನ ಆದ್ರು ಕೊಂಡ್ರೆ ಮ ಅಕ್ಷಯ ಥರಾ ಐಶ್ವರ್ಯ ಉಕ್ಕುತ್ತೇ ಅನ್ನೋ ನಂಬಿಕೆ.. ಹೀಗಾಗಿ ಅಕ್ಷಯ ತೃತೀಯ ದಿನ ಮನೆಗೆ ಚಿನ್ನ ಕೊಳ್ಳಬೇಕು ಅಂತಾ ಜನರ ಆಸೆ. ಆದ್ರೆ ಜನರ ಆಸೆಗೆ ತಣ್ಣೀರು ಎರಚಿದಂಗಾಗಿದ್ದು, ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದೆ. 5 ಸಾವಿರಕ್ಕೆ ಸಿಗ್ತಾ ಇದ್ದ ಚಿನ್ನ, ಇದೀಗ 10 ಸಾವಿರ ಗಡಿ ತಲುಪುತ್ತಿದೆ. ಹೀಗಿರುವಾಗ ಅಕ್ಷಯ ತೃತೀಯ ದಿನ ಹೇಗಪ್ಪ ಚಿನ್ನ ಖರೀದಿಸೋದು ಅನ್ನೋ ಆತಂಕದಲ್ಲಿ ಜನರಿದ್ರು.ಆದ್ರೆ ಜನರು ಅಷ್ಟು ನಿರಾಸೆ ಆಗೋ ಅಗತ್ಯ ಇಲ್ಲ. ಜನರ ಆಸೆಯಂತೆ ಅಕ್ಷಯಾ ತೃತೀಯಾ ದಿನ ಚಿನ್ನವನ್ನು ಮನೆಗೆ ತಗೊಂಡು ಹೋಗ್ಲಿ ಅಂತಾ ಚಿನ್ನದ ವ್ಯಾಪಾರಿಗಳು ಗುಡ್ ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ.
ಜನರು ತಮ್ಮ ಆಸೆಯಂತೆ ಚಿನ್ನವನ್ನು ಮನೆಗೆ ತೆಗದುಕೊಂಡು ಹೋಗಲಿ ಅಂತಾ ಮಾರುಕಟ್ಟೆಗೆ ಅರ್ಧ ಗ್ರಾಂ ಚಿನ್ನದ ನಾಣ್ಯಗಳು ಬಂದಿದ್ದು, ಒಂದು ಗ್ರಾಂ ಚಿನ್ನದ ನಾಣ್ಯ ತೆಗೆದುಕೊಳ್ಳಲು ಆಗದವರು ಅರ್ಧ ಗ್ರಾಂ ಚಿನ್ನ ಆದ್ರು ತಗೊಂಡು ಹೋಗಬಹುದಾಗಿದೆ. ಇನ್ನು ಅರ್ಧ ಗ್ರಾಂ ಚಿನ್ನಕ್ಕೆ 5 ರಿಂದ 5 ವರೆ ಸಾವಿರ ಹಣ ಇರಲಿದ್ದು ಗ್ರಾಹಕರು ಸುಲಭವಾಗಿ, ಖುಷಿಯಿಂದ ಚಿನ್ನವನ್ನು ತಗೊಂಡು ಹೋಗಿ ಅಕ್ಷಯ ತೃತೀಯ ಹಬ್ಬವನ್ನು ಆಚರಣೆ ಮಾಡಬಹುದಾಗಿದೆ. ಇನ್ನು ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಚಿನ್ನದ ಅಂಗಡಿ ಮಾಲೀಕರು ಇದೇ ಮೊದಲ ಬಾರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದ್ದಾರೆ. ಇದ್ರಿಂದ ಅಕ್ಷಯ ತೃತೀಯದ ದಿನ ಕನಿಷ್ಠ ಅರ್ಧ ಗ್ರಾಂ ಚಿನ್ನ ಖರೀದಿಸಲಿ ಎಂದು ಈ ಐಡಿಯಾ ಮಾಡಲಾಗಿದ್ದು, ಈ ಐಡಿಯಾದಿಂದ ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ನಲ್ಲಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವ ಸಂಪ್ರದಾಯದಂತೆ, ಜನರು ಚಿನ್ನವನ್ನು ಖರೀದಿ ಮಾಡಿಕೊಂಡು ಹೋಗಬಹುದಾಗಿದೆ, ಬಂಗಾರದ ಬೆಲೆ ಗಗನಮುಖಿಯಾಗಿದ್ದು ಇದೀಗ ಗ್ರಾಂ ಕೊಳ್ಳುತ್ತಿದ್ದ ಜನ ಅರ್ಧ ಗ್ರಾಂ ಚಿನ್ನ ಖರೀದಿಗೆ ಮನಸ್ಸು ಮಾಡ್ತಿರೋದಂಥೂ ಸುಳ್ಳಲ್ಲಾ.