ಚಿಕ್ಕಬಳ್ಳಾಪುರ:
ಯಾವುದೇ ಕ್ಷೇತ್ರ ಮುಂದುವರೆಯಲು ಶ್ರಮಿಕ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಸಮಾಜಕ್ಕೆ ಕಾರ್ಮಿಕರ ಕೊಡುಗೆ ಅಪಾರ. ಕಾರ್ಮಿಕರು ದೇಶದ ಅಭಿವೃದ್ಧಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಶ್ರಮಜೀವಿಗಳು. ಕಾರ್ಮಿಕರ ಬದುಕು ಬಂಗಾರ ಮಾಡುವ ಕೆಲಸವಾಗಬೇಕಾಗಿದೆ ಎಂದು ಕೆ. ವಿ. ಪಂಚಗಿರಿ ದತ್ತಿ ಅಧ್ಯಕ್ಷರಾದ ಕೆ.ವಿ. ನವೀನ್ ಕಿರಣ್ ಚಿಕ್ಕಬಳ್ಳಾಪುರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದ 23ನೇ ವಾರ್ಡ್ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಶ್ರಮಿಕರ ಸಂಜೀವಿನಿ ಸೇವಾ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆ ಹಾಗೂ ಸಂಘದ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಮಿಕನಿಲ್ಲದೆ ಯಾವುದೇ ಬಿಲ್ಡಿಂಗ್ ಆಗಲಿ, ಗುಡಿಸಲಾಗಲಿ ಕಟ್ಟಲು ಸಾಧ್ಯವಿಲ್ಲ. ನಿಮ್ಮಂತಹ ಜನರನ್ನ ಇಂದು ಸರ್ಕಾರಗಳು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಿಮ್ಮ ಕೆಲಸವನ್ನು ಕಸಿಯುವ ಕೆಲಸ ಮಾಡ್ತಿವಿ ಸರ್ಕಾರಗಳು. ನಿಮ್ಮ ಶ್ರಮದ ಮುಂದೆ ಪ್ರಪಂಚದಲ್ಲಿ ಏನು ಇಲ್ಲ. ಯಾವುದೇ ಒಂದು ಕ್ಷೇತ್ರ ಕಾರ್ಮಿಕರು ಇಲ್ಲದೆ ಮುಂದುವರೆಯಲು ಸಾಧ್ಯವಿಲ್ಲ ಎಂದರು.
ಇನ್ನು ಇದೇ ವೇಳೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಶ್ರಮಿಕರ ಸಂಜೀವಿನಿ ಸೇವಾ ಸಂಘದ ರಾಜ್ಯಾಧ್ಯಕ್ಷ ಜಿ ವಿ ಮೂರ್ತಿ ಮಾತನಾಡಿ, ನಮ್ಮ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ಟೀಕೆಗಳ ನಡುವೆಯೂ ನಿರಂತರವಾಗಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕಪ್ರಯತ್ನ ಮಾಡಲಾಗುತ್ತಿದೆ. ಇನ್ನು ನಮ್ಮ ಸೇವೆಯನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಸಂಘದ ಕಚೇರಿ ಉದ್ಘಾಟನೆ ಮಾಡಿರುವುದು ಸಂತಸದ ವಿಷಯ. ನೊಂದ ಕಾರ್ಮಿಕರಿಗೆ, ಸೌಲಭ್ಯ ವಂಚಿತರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಂಘದ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳಾಗಿ ಮಂಜುಳಮ್ಮ ಮೋಹನ್, ಶಶಿಕಲಾ, ರತ್ನಮ್ಮ, ಲಕ್ಷ್ಮಿ ದೇವಮ್ಮ, ಮಂಜುಳಾ ಅವರನ್ನು ಆಯ್ಕೆ ಮಾಡಲಾಯಿತು ಜೊತೆಗೆ ಹಿರಿಯ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಆನಂದ ರೆಡ್ಡಿ ಬಾಬು,ಮಂಜುನಾಥ್,ರಮನ ಅಕ್ಕೇಶ್,ಸಂಘದ ರಾಜ್ಯ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ,ಬವಿ ಕೃಷ್ಣ,ನಗರಸಭೆ ಮಾಜಿ ಸದಸ್ಯ ಹಾಗೂ ಸಂಘದ ಜಿಲ್ಲಾ ಮುಖಂಡರಾದ ಜಿ.ಮುನಿಕೃಷ್ಣ, ಪ್ರಕಾಶ್, ಎಲ್ಲಾ ಪದಾಧಿಕಾರಿಗಳು ಭಾಗಿ ಯಾಗಿದ್ದರು.