ಶಿರಾ :
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರು ಇನ್ನು ಅದೆಷ್ಟೋ ಗ್ರಾಮಗಳೂ ಇನ್ನು ಬಸ್‌ನನ್ನೇ ಕಂಡಿಲ್ಲ. ನಿತ್ಯ ಹತ್ತಾರು ಕಿಲೋ ಮೀಟರ್ ನಡೆದುಕೊಂಡೆ ಓಡಾಡುವ ದುಸ್ಥಿತಿ ಇದೆ. ಕೆಲವೊಂದು ಗ್ರಾಮಗಳಿಗೆ ಕೆಲವು ಸೌಲಭ್ಯ ಸಿಕ್ಕರೆ ಇನ್ನು ಕೆಲ ಗ್ರಾಮಗಳಿಗೆ ಸೌಲಭ್ಯಗಳೇ ಸಿಗುತ್ತಿಲ್ಲ. ಈ ಮಧ್ಯೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಜಾನಕಲ್ ಗ್ರಾಮಕ್ಕೆ ಸುಮಾರು 75 ವರ್ಷಗಳ ಬಳಿಕ ಬಸ್ ಬಂದಿದ್ದು, ಸರ್ಕಾರಿ ಬಸ್ ಕಂಡು ಗ್ರಾಮದ ಜನರಂಥೂ ಫುಲ್ ಖುಷಿಯಾಗಿದರು.
ಸ್ವಾತಂತ್ರ್ಯ ಬಳಿಕ ಶಿರಾ ತಾಲೂಕಿನ ಜಾನಗಲ್ ಗ್ರಾಮಕ್ಕೆ ಈಗ ಸರ್ಕಾರಿ ಬಸ್ ಸೇವೆ ಸಿಕ್ಕಿದ್ದು, ಇಷ್ಟು ವರ್ಷದ ಬಳಿಕ ಬಸ್ ಬಂದ ಖುಷಿಯಲ್ಲಿ ಗ್ರಾಮಸ್ಥರು ಬಸ್‌ಗೆ ಪೂಜೆ ಮಾಡಿ, ಕೈ ಮುಗಿದು ಬಸ್ ಹತ್ತಿ ಪ್ರಯಾಣ ಮಾಡಿ ಸಂತಸ ಪಟ್ಟರು. ಇನ್ನು ಸರ್ಕಾರಿ ಬಸ್ ಸೌಲಭ್ಯದಿಂದಾಗಿ ವಿಶೇಷವಾಗಿ ಶಾಲಾ ಮಕ್ಕಳಿಗೆ ಸರಿಯಾಗಿ ಶಾಲೆಗೆ ಹೋಗಲು ಅನುಕೂಲ ಆಗಲಿದೆ.
ಇನ್ನು ಈ ಗ್ರಾಮಕ್ಕೆ ಇಷ್ಡು ವರ್ಷ ಬಸ್ ಸೌಲಭ್ಯ ಇಲ್ಲದೇ ನಿತ್ಯ ಕೆಲಸಗಳಿಗೆ, ಆಸ್ಪತ್ರೆ, ಶಾಲೆಗೆ ಹೋಗಲು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಗ್ರಾಮದ ಜನರು ಮೊದಲ ಬಾರಿಗೆ ಬಸ್ ಬಂದಿದ್ದು, ಗ್ರಾಮದ ಜನರಲ್ಲಿ ಇನ್ನಿಲ್ಲದ ಸಡಗರ ಸಂಭ್ರಮ ತರುವಂತೆ ಮಾಡಿದೆ. ಈ ಸರ್ಕಾರಿ ಬಸ್ ಗ್ರಾಮದಲ್ಲಿ ದಿನಕ್ಕೆ ಎರಡು ಬಾರಿ ಓಡಾಟ ನಡೆಸುವ ಜೊತೆಗೆ ರಾತ್ರಿ ಇದೇ ಗ್ರಾಮದಲ್ಲಿ ಬಸ್ ತಂಗಲಿದ್ದು ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.