ಶಿರಾ: ಶಿರಾದಲ್ಲಿ ಕುಡಿಯುವ ನೀರಿನ ಸಂಸ್ಕರಣಾ ಘಟಕದ ಶಂಕು ಸ್ಥಾಪನೆ

ಶಿರಾ: 

ಶಿರಾ ನಗರದ ದೊಡ್ಡಕೆರೆ ಬಳಿ ಅಮೃತ ಯೋಜನೆಯಡಿ ಕುಡಿಯುವ ನೀರಿನ ಸಂಸ್ಕರಣಾ ಘಟಕ ಕಟ್ಟಡಕ್ಕೆ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ. ಟಿ.ಬಿ ಜಯಚಂದ್ರ ಭೂಮಿ ಪೂಜೆಯನ್ನು ನೇರವೇರಿಸಿದ್ರು, ಈ ವೇಳೆ ನಗರಸಭೆ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ರು.

ಈ ವೇಳೆ ಶಾಸಕ ಟಿ.ಬಿ ಜಯಚಂದ್ರ ಮಾತನಾಡಿ ಶಿರಾ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ರು. ಅಲ್ದೇ ನಗರದಲ್ಲಿ ಹದಿನಾರರಿಂದ ಹದಿನೇಳು ಸಾವಿರ ಮನೆಗಳಿದೆ ಎಂದು ಅಂದಾಜು ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ನಗರದಲ್ಲಿ ಮೂರು ವಾಟರ್‌ ಟ್ಯಾಂಕ್‌ ಕಾಮಗಾರಿ ನಡೀತಿದೆ , ಇನ್ನು ಇದಕ್ಕೆ ಸುಮಾರು 7 MLD ನೀರು ಬೇಕಾಗುತ್ತೇ ಅದಕ್ಕಾಗಿಯೇ ಪಂಪ್‌ ಹೌಸ್‌ ನಿರ್ಮಾಣ ಮಾಡಲಾಗ್ತಿದೆ ಅಂದ್ರು. ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಮನೆಗಳಿಗೂ ಸುಗಮವಾಗಿ ನೀರು ಸರಬರಾಜು ಮಾಡಲಾಗುತ್ತೇ ಎಂದು ತಿಳಿಸಿದ್ರು.

Author:

...
Sub Editor

ManyaSoft Admin

share
No Reviews