MOVIE : ಕುದುರೆ ಮೇಲೆ ಸವಾರಿ | ಅರ್ಜುನ್‌ ಅರ್ಜಾ ಫೋಟೋ ಶೂಟ್‌‌ಗೆ ಫ್ಯಾನ್ಸ್‌ ಫಿದಾ

ಸಿನಿಮಾ : ಅರ್ಜುನ್ ಸರ್ಜಾ ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿ ರಸಿಕರಿಗೆ ಪರಿಚಿತವಾದ ಹೆಸರು. ಆಕ್ಷನ್ ಸೀನ್ಸ್‌ನಲ್ಲಿ ಔದಾರ್ಯ ತೋರಿಸಿ, 'ಆಕ್ಷನ್ ಕಿಂಗ್' ಎಂಬ ಬಿರುದನ್ನು ತಮ್ಮದಾಗಿಸಿಕೊಂಡವರು. ಇತ್ತೀಚೆಗೆ ಅರ್ಜುನ್‌ ಅರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎರಡು ಫೋಟೋಗಳು ಈಗ ವೈರಲ್ ಆಗುತ್ತಿವೆ.

ಈ ಫೋಟೋಗಳಲ್ಲಿ, ಅರ್ಜುನ್ ಸರ್ಜಾ ಅವರು ಕುದುರೆ ಮೇಲೆ ಕುಳಿತು, ಸಿಟ್ಟಿನ ಲುಕ್ ನೀಡುತ್ತಿರುವ ದೃಶ್ಯವಿದೆ. ಶುದ್ಧ ಬ್ಲ್ಯಾಕ್ ಆ್ಯಂಡ್ ವೈಟ್ ಫ್ರೇಮಿನಲ್ಲಿ ಹಿಡಿದಿಡಲಾದ ಈ ಫೋಟೋಗಳು, ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತಿವೆ.

ಅವರು ಯಾವ ಚಿತ್ರಕ್ಕಾಗಿ ಈ ಲುಕ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಮಾತ್ರ ಸ್ಪಷ್ಟವಾಗಿಲ್ಲ. ಅರ್ಜುನ್ ಅವರು ಈ ಫೋಟೋಗಳ ಜೊತೆ ಯಾವುದೇ ಕ್ಯಾಪ್ಷನ್ ಅಥವಾ ಚಿತ್ರದ ಹೆಸರು ತಿಳಿಸಿಲ್ಲ. ಆದರೂ, ಈ ದೃಶ್ಯಗಳನ್ನು ನೋಡಿದ ಅಭಿಮಾನಿಗಳು, "ಅರ್ಜುನ್ ಸರ್ ಫಿಟ್ ಆಗಿದ್ದಾರೆ", "ಪೋಸ್ ಸಖತ್ ಇದೆ", ಎಂಬಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅರ್ಜುನ್ ಸರ್ಜಾ ಅವರು ವರ್ತಮಾನದಲ್ಲಿ ಸಿನಿಮಾ ನಟನೆಯ ಜೊತೆಗೆ ನಿರ್ದೇಶನ, ವರ್ಕೌಟ್ ಹಾಗೂ ಕರಾಟೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಇದಕ್ಕೆ ಹಾರ್ಸ್ ರೈಡಿಂಗ್ ಕೂಡ ಸೇರ್ಪಡೆ ಆಗಿರುವುದಾಗಿ ಈ ಫೋಟೋಗಳು ಸೂಚಿಸುತ್ತವೆ. ಅರ್ಜುನ್ ಸರ್ಜಾ ಕುದುರೆ ಮೇಲೆ ಕುಳಿತು ಸಖತ್ ಪೋಸ್ ಕೊಟ್ಟಿದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews