ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್ ಪ್ರದೇಶದಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ದೆಹಲಿಯಲ್ಲಿ ಭೂಕಂಪ ಸಂಭವಿಸಿದ ಎರಡು ಗಂಟೆಯಲ್ಲೇ ಬಿಹಾರದಲ್ಲಿ ಭೂಕಂಪವಾಗಿದೆ.
ಗಾಢ ನಿದ್ದೆಯಲ್ಲಿದ್ದ ದೆಹಲಿ ಜನರು ಇದರಿಂದ ಗಾಬರಗೊಂಡಿದ್ದಾರೆ. ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಇದರ ಪರಿಣಾಮ ಕಂಡುಬಂದಿದೆ. ಅನೇಕ ಜನರು ತಮ್ಮ ಮನೆಗಳಿಂದ ಓಡಿ ಹೊರಬಂದು ನಿಂತಿದ್ದಾರೆ. ಸದ್ಯ ಯಾವುದೇ ಪ್ರಾಣಾ ಹಾನಿಗಳು ಸಂಭವಿಸಿಲ್ಲ ಎಂದು ವಿಪತ್ತು ನಿರ್ವಹಣಾ ಇಲಾಖೆಯು ಮಾಹಿತಿ ನೀಡಿದೆ.
ದೆಹಲಿಯಲ್ಲಿ ಇಂದು ಬೆಳಗ್ಗೆ 4.0 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜನರು ಶಾಂತವಾಗಿರಲು ಮನವಿ ಮಾಡಿದ್ದಾರೆ. ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷಿತ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಒತ್ತಾಯಿಸುತ್ತೇನೆ, ಸಂಭವನೀಯ ಭೂಕಂಪಗಳ ಬಗ್ಗೆ ಜಾಗರೂಕತೆಯಿಂದ ಇರುವಂತೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.