ಸಿನಿಮಾ-ಟಿವಿ :
ಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ, ಕಾಮಿಡಿ ಕಿಲಾಡಿ ಶೋ ಮೂಲಕ ಸದಾ ಎಲ್ಲರನ್ನು ನಗಿಸುತ್ತಾ… ತನ್ನ ಕಷ್ಟದ ಜೀವನದಲ್ಲೂ, ಅವಮಾನಗಳನ್ನು ಮೆಟ್ಟಿನಿಂತು, ತನ್ನ ಹಾಸ್ಯದ ಮೂಲಕ ಎಲ್ಲರ ಮನಗೆದ್ದಿದ್ದ ರಾಕೇಶ್ ಅವರು ಅಕಾಲಿಕ ಮರಣಹೊಂದಿದ್ದಾರೆ. ಆರೋಗ್ಯವಾಗಿಯೇ ಇದ್ದ ಹಾಸ್ಯ ನಟ ರಾಕೇಶ್, ನಿನ್ನೆ ಉಡುಪಿಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ರು, ಆದ್ರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹಾರ್ಟ್ ಅಟ್ಯಾಕ್ನಿಂದ ಕುಸಿದುಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೂ ಕೂಡ ಕರೆದೊಯ್ಯಲಾಯ್ತು ಆದ್ರೆ ಅಷ್ಟರಲ್ಲಿ ಆಗಲೇ ರಾಕೇಶ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಉಡುಪಿ ಮೂಲದ ರಾಕೇಶ್ 2018 ರ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್-2 ರನ್ನರ್ ಅಪ್ ಆಗಿದ್ರು. ಕಾಮಿಡಿ ಕಿಲಾಡಿ ಶೋ ಬಳಿಕ ರಾಕೇಶ್ ತುಳು ಹಾಗೂ ಕನ್ನಡದ ಕೆಲ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ನಟನೆ ಮಾಡಿದ್ರು. ಜೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್ನಲ್ಲೂ ಕೂಡ ರಾಕೇಶ್ ನಟಿಸಿ ಸೈ ಎನಿಸಿಕೊಂಡಿದ್ರು. ಅಲ್ದೇ ತನ್ನ ಹಾಸ್ಯ ಚಟಾಕಿಯಿಂದಲೇ ಕನ್ನಡಿಗರ ಮನಗೆದ್ದಿದ್ರು. ರಾಕೇಶ್ ಅಕಾಲಿಕ ಮರಣದಿಂದ
ಇನ್ನು ರಾಕೇಶ್ ನಿಧನಕ್ಕೆ ಜೀ ಕನ್ನಡ ಬಳಗ ಸೇರಿ ಅನೇಕ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ನಟಿ ರಕ್ಷಿತಾ ಪ್ರೇಮ್, ನಟ ಶಿವರಾಜ್ ಕೆ.ಆರ್ ಪೇಟೆ, ಸೇರಿ ಹಲವಾರು ಮಂದಿ ಸೋಶಿಯಲ್ ಮಿಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಇನ್ನು ಮುಂದೆ ರಾಕೇಶ್ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಶೋ. ರಾಕೇಶ್ ವಿಭಿನ್ನವಾದ ವ್ಯಕ್ತಿ. ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷಕ್ಕೆ ಧನ್ಯವಾದ ಎಂದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಕ್ಷಿತಾ ಪ್ರೇಮ್ ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಕೆ.ಆರ್ ಪೇಟೆ ಅವರು ಎಷ್ಟೋ ಮನಸ್ಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸದಾ ನಗುತ್ತಾ… ತನ್ನ ಸುತ್ತ ಇರುವವರನ್ನು ಕಾಮಿಡಿ ಮೂಲಕ ನಗಿಸುತ್ತಿದ್ದ ಕಾಮಿಡಿ ಸ್ಟಾರ್ ರಾಕೇಶ್, ಇನ್ನು ಬಾಳಿ ಬದುಕಬೇಕಿತ್ತು. ಆದ್ರೆ ವಿಧಿಯ ಕ್ರೂರತೆಗೆ ಕಾರ್ಯಕ್ರಮದಲ್ಲಿ ನಗಿಸುತ್ತಾ, ಡ್ಯಾನ್ಸ್ ಮಾಡುತ್ತಲೇ ಕುಸಿದುಬಿದ್ದು ಕೊನೆಯುಸಿರುಳೆದಿದ್ದು ಮಾತ್ರ ದುರಂತವೇ ಸರಿ… ರಾಕೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಜಾಶಕ್ತಿ ಪ್ರಾರ್ಥಿಸುತ್ತಿದೆ.