Recipes :
ಸಿಹಿ ಕುಂಬಳಕಾಯಿ ಹಲ್ವಾ ಭಾರತೀಯ ಸಿಹಿ ಖಾದ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಹೆಚ್ಚಾಗಿ ಇದನ್ನು ಮಾಡಲಾಗುತ್ತದೆ. ಕುಂಬಳಕಾಯಿ ಹಲ್ವಾವನ್ನು ಕಡ್ಡು ಕಾ ಹಲ್ವಾ ಎಂದು ಸಹ ಕರೆಯುತ್ತಾರೆ. ಇದು ಆರೋಗ್ಯಕರವಾದ ಸಿಹಿ ತಿನಿಸಾಗಿದ್ದು ವಿಶೇಷವಾಗಿ ಮಕ್ಕಳಿಗೆ ಹಾಗೂ ಹಬ್ಬದ ಸಂದರ್ಭಕ್ಕೆ ತಕ್ಕದ್ದಾಗಿದೆ. ಮನೆಯಲ್ಲೇ ಸುಲಭವಾಗಿ ಈ ಹಲ್ವಾವನ್ನು ಮಾಡಬಹುದು.
ಸಿಹಿ ಕುಂಬಳಕಾಯಿ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
- ಸಿಹಿ ಕುಂಬಳಕಾಯಿ (Pumpkin) – 2 ಕಪ್
- ಹಾಲು – 1 ಕಪ್
- ಸಕ್ಕರೆ – 1/2 ಕಪ್
- ತುಪ್ಪ – 3 ಟೇಬಲ್ ಸ್ಪೂನ್
- ಏಲಕ್ಕಿ ಪುಡಿ – 1/4 ಟೀ ಸ್ಪೂನ್
- ಒಣಗಿದ ದ್ರಾಕ್ಷಿ, ಕಡಲೆಬೀಜ, ಬಾದಾಮಿ
ಸಿಹಿ ಕುಂಬಳಕಾಯಿ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ತುರಿದ ಸಿಹಿ ಕುಂಬಳಕಾಯಿಯನ್ನು ಹಾಕಿ, 1 ಕಪ್ ಹಾಲು ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ನೀರು ಇಳಿದು, ಸಿಹಿ ಕುಂಬಳಕಾಯಿಯನ್ನು ಹುರಿಯಬೇಕು. ಕುಂಬಳಕಾಯಿ ಚೆನ್ನಾಗಿ ಬೇಯಿಸಿದ ಮೇಲೆ ಅದಕ್ಕೆ ಸಕ್ಕರೆ ಹಾಕಿ ಹಲ್ವಾ ಒಂದು ಹದಕ್ಕೆ ಬರುವವರೆಗೆ ಕುದಿಸಬೇಕು. ನಂತರ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಲ್ವಾ ಪಾತ್ರೆಗೆ ಜಾಗ ಬಿಟ್ಟುಕೊಳ್ಳುವವರೆಗೆ ತುಪ್ಪದಲ್ಲಿ ಹುರಿದು ಕೊನೆಗೆ ಏಲಕ್ಕಿ ಪುಡಿ, ಹುರಿದ ಬಾದಾಮಿ, ಕಡಲೆಬೀಜಗಳನ್ನು ಸೇರಿಸಿ ಮಿಕ್ಸ್ ಮಾಡಿ ಹದಕ್ಕೆ ಬಂದ ಮೇಲೆ ಗ್ಯಾಸ್ ಆಫ್ ಮಾಡಬೇಕು. ಗೋಡಂಬಿಯಿಂದ ಅಲಂಕರಿಸಿ