ಗುಬ್ಬಿ:
ಸಿಎಂ ಸಿದ್ದರಾಮಯ್ಯ ಚಿಕ್ಕವಯಸ್ಸಿನಲ್ಲಿ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಜಾತಿಗಣತಿ ವಿರುದ್ಧ ಲೇವಡಿ ಮಾಡಿದ್ದಾರೆ.
ಗುಬ್ಬಿಯ ತಮ್ಮ ಶಾಸಕರ ಕಾರ್ಯಾಲಯದಲ್ಲಿ ತಮ್ಮ ಕ್ಷೇತ್ರದ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುರುಬರು 44 ಲಕ್ಷ ಎಂದು ಹೇಳುತ್ತಿದ್ದು, ಎಷ್ಟು ಲಕ್ಷ ಜನ ಎಸ್ಟಿ ಜನಾಂಗಕ್ಕೆ ಹೋಗಿದ್ದಾರೆ. ಕಾಡು ಕುರುಬ, ಜೇನುಕುರುಬ, ಎಲ್ಲರನ್ನೂ ಎಸ್ ಟಿ ಜನಾಂಗಕ್ಕೆ ಸೇರಿಸಿ 44 ಲಕ್ಷ ಎಂದು ತೋರಿಸುತ್ತಿದ್ದಾರೆ ಇದು ತಪ್ಪಲ್ಲವೇ ಎಂದರು.
ಇದೊಂದು ಅವೈಜ್ಞಾನಿಕ ಜಾತಿಗಣತಿ ಆಗಿದ್ದು ಕೂಡಲೇ ಹಿಂಪಡೆಯಬೇಕಿದೆ. ನಮ್ಮ ದೇಶ ಜಾತ್ಯತೀತವಾಗಿದ್ದು, ಇಲ್ಲಿ ಜಾತಿಗಣಿತಿ ಸಮೀಕ್ಷೆ ಯಾರಿಗೆ ಬೇಕಿತ್ತು, ಬೇಕಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಕೇಂದ್ರ ಸಮೀಕ್ಷೆ ಮಾಡಿ ಕೊಡಲಿದೆ. ಇವರಿಗೆ ನಾಚಿಕೆಯಾಗಬೇಕು ಎಸ್ಟಿ ಕೋಟಾದಲ್ಲಿ ಮೀಸಲಿಟ್ಟ ಹಣ ಯಾವುದಕ್ಕೆ ಬಳಕೆ ಮಾಡಿದ್ದೀರಿ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಬೋರಪ್ಪನಹಳ್ಳಿ ಕುಮಾರ್, ಸಿಎಸ್ ಪುರ ಹೋಬಳಿ ಅಧ್ಯಕ್ಷ ಜಗದೀಶ್, ಬೀರಮಾರನಹಳ್ಳಿ ನರಸೇಗೌಡ, ಕೃಷ್ಣೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದರು.