ಚಿಕ್ಕನಾಯಕನಹಳ್ಳಿ : ಲಂಚ ಕೇಳಿದ ಅಧಿಕಾರಿ ಟೇಬಲ್ ಮೇಲೆ ಚಿಲ್ಲರೆ ಸುರಿದ ರೈತ..!

ಕಛೇರಿಯಲ್ಲಿದ್ದ ರಾಘವೇಂದ್ರ ಒಡೆಯರ್‌ ಟೇಬಲ್‌ ಮೇಲೆ ಹಾರ ಹಾಕಿ ಪೇಟ ತೊಡಿಸಿ ಚಿಲ್ಲರೆ ಹಣ ಸುರಿದಿರುವುದು.
ಕಛೇರಿಯಲ್ಲಿದ್ದ ರಾಘವೇಂದ್ರ ಒಡೆಯರ್‌ ಟೇಬಲ್‌ ಮೇಲೆ ಹಾರ ಹಾಕಿ ಪೇಟ ತೊಡಿಸಿ ಚಿಲ್ಲರೆ ಹಣ ಸುರಿದಿರುವುದು.
ತುಮಕೂರು

ಚಿಕ್ಕನಾಯಕನಹಳ್ಳಿ : 

ಸರ್ಕಾರಿ ಅಧಿಕಾರಿಗಳಿಗೆ ಅದೆಷ್ಟು ಸಂಬಳ ಬಂದರೂ ಕೂಡ ಲಂಚ ತಗೊಳೋದನ್ನು ಮಾತ್ರ ಬಿಡ್ತಾ ಇಲ್ಲ. ಭ್ರಷ್ಟರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅದೆಷ್ಟು ಕ್ರಮ ಕೈಗೊಂಡರು ಲಂಚಬಾಕತನ ಮಾತ್ರ ನಿಲ್ತಾ ಇಲ್ಲ. ಭ್ರಷ್ಟ ಅಧಿಕಾರಿಯ ಲಂಚತನಕ್ಕೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು, ಕೆಆರ್‌ಎಸ್‌ ಪಕ್ಷದ ಮುಖಂಡರು ಸರಿಯಾಗಿ ಪಾಠ ಕಲಿಸಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಅಧಿಕಾರಿ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿ ಕಕ್ಕಾಬಿಕ್ಕಿಯಾಗಿದ್ದಾರೆ.

ಈ ಅಪರೂಪದ ಘಟನೆ ನಡೆದಿರುವುದು ಚಿಕ್ಕನಾಯಕನಹಳ್ಳಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ. ಉಪನೋಂದಣಾಧಿಕಾರಿ ಅಧಿಕಾರಿಗಳು ರೈತರ ಕೆಲಸ ಮಾಡಿಕೊಡಲು ಲಂಚ ಕೇಳಿದ್ದಾರೆ. ಹೀಗಾಗಿ ಭ್ರಷ್ಟ ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ರೈತರು ಉಪ ನೋಂದಣಾಧಿಕಾರಿಯಾಗಿರುವ ರಾಘವೇಂದ್ರ ಒಡೆಯರ್‌ ಅವರ ಕಚೇರಿಗೆ ನುಗ್ಗಿದ ರೈತರು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭ್ರಷ್ಟ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಸಂಗ್ರಹಿಸಿ ಅಧಿಕಾರಿ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಿಷ್ಟಲ್ಲದೇ ಕಚೇರಿಯಲ್ಲಿದ್ದ ರಾಘವೇಂದ್ರ ಅವರಿಗೆ ಮೈಸೂರು ಪೇಟ ತೊಡಿಸಲು ಮುಂದಾಗುತ್ತಿದ್ದಂತೆ ಹೋರ ಹೋಗಲು ಯತ್ನಿಸಿದ ಅಧಿಕಾರಿಯನ್ನು ತಡೆಹಿಡಿದಿದ್ದಾರೆ. ಅಧಿಕಾರಿಯ ಕುರ್ಚಿಗೆ ಹಾರ ಹಾಕಿ, ಪೇಟ ತೊಡಿಸಿ ಸನ್ಮಾನ ಮಾಡಲಾಗಿದ್ದು ಇದರಿಂದ ಲಂಚ ಕೇಳಿದ ಅಧಿಕಾರಿ ತೀವ್ರ ಮುಜುಗರಕ್ಕೆ ಒಳಗಾದರು. ಈ ವೇಳೆ ರೈತರು ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ನೀವೆ ಕಾರಣರಾಗಿದ್ದೀರಿ. ಈಗ ನಮಗೆ ಸರ್ಕಾರಿ ಕೆಲಸವಾಗಬೇಕಿದ್ದು, ಅದಕ್ಕಾಗಿ ನಾವು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದು ತೆಗೆದುಕೊಳ್ಳಿ ಎಂದು ಚಿಲ್ಲರೆ ಹಣವನ್ನು ರಾಘವೇಂದ್ರ ಒಡೆಯರ್ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

Author:

...
Editor

ManyaSoft Admin

Ads in Post
share
No Reviews