ಬೆಂಗಳೂರು :
ಇತ್ತೀಚಿನ ದಿನಗಳಲ್ಲಿ ಬಿಸಿಲಿನಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಮಳೆಯ ಅಭಾವ ಹಾಗೂ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿರುವುದರಿಂದ ತರಕಾರಿಗಳ ದರಗಳು ಗಗನಕ್ಕೇರಿವೆ. ಮಳೆಯಿಂದಾಗಿ ತರಕಾರಿಗಳು ಇಳುವರಿ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮಧ್ಯಮ ವರ್ಗದವರು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ.
ಕೆಲವೆಡೆ ಮಳೆಯ ಅಭಾವ ಹಾಗೂ ಬಿಸಿಲಿನಿಂದ ಬೆಳೆಗಳಿಗೆ ಹಾನಿಯಾಗುತ್ತಿವೆ. ಇದರಿಂದಾಗಿ ಕೆಲ ತರಕಾರಿಗಳ ಬೆಲೆಯಂತೂ ಗಗನಕ್ಕೇರಿದೆ. ಇದರಿಂದ ಬೆಂಗಳೂರಿನ ಬಡವರಿಗೂ ಹಾಗೂ ಮಾಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆಗಳು ಏರಿಕೆಯಾಗುತ್ತಿದ್ದರೆ, ತರಕಾರಿಗಳನ್ನು ಕೊಳ್ಳವುದಕ್ಕೂ ಯೋಚಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಇನ್ನು ಬೀನ್ಸ್, ಬಟಾಣಿ, ತೆಂಗಿನಕಾಯಿ, ಖಾಲಿ ಫ್ಲವರ್, ದಪ್ಪ ಮೆಣಸಿನಕಾಯಿ, ನಿಂಬೆ, ತೆಂಗಿನಕಾಯಿ ದರಗಳಂತೂ ಗಗನಕ್ಕೆರಿವೆ. ಗ್ರಾಹಕರು ತರಕಾರಿಗಳನ್ನು ಹೇಗಪ್ಪ ಕೊಂಡುಕೊಳ್ಳುವುದು ಎಂದು ಯೋಚಿಸುತ್ತಿದ್ದಾರೆ. ಇನ್ನು ತರಕಾರಿಗಳ ಬೆಲೆ ಹಾಗೂ ಹಣ್ಣಿನ ಬೆಲೆಯೂ ಕೂಡ ದಿಢೀರ್ ಹೆಚ್ಚಾಗಿದ್ದು, ಕೆಜಿಗೆ 80 ರಿಂದ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ತರಕಾರಿಗಳನ್ನು ಕೊಂಡುಕೊಳ್ಳುವುದ್ದಕ್ಕೆ ಸಾಧ್ಯವಾಗುತ್ತಿಲ್ಲ. ವಾತಾವರಣ ಬದಲಾವಣೆಗೆ ಕೆಲವು ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಇದರಿಂದಾಗಿ ತರಕಾರಿಗಳ ಇಳುವರಿ ಕಡಿಮೆಯಾಗುತ್ತವೆ. ಹೀಗಾಗಿ ಬೆಲೆ ಜಾಸ್ತಿಯಾಗ್ತಿದೆ.