ಬೆಂಗಳೂರು : ಬೆಂಗಳೂರಿನಲ್ಲಿ ವರುಣನ ಅವಾಂತರ | ಡಿಸಿಎಂ ಡಿಕೆ ಶಿವಕುಮಾರ್‌ ಕಳವಳ

ಬೆಂಗಳೂರು : ಬೆಂಗಳೂರು ನಗರದ ಹಲವೆಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಹಲವೆಡೆ ರಸ್ತೆಗಳು ಜಲಾವೃತ್ತಗೊಂಡಿದ್ದರೆ, ಕೆಲವೊಂದು ಪ್ರದೇಶಗಳಲ್ಲಿ ಮನೆಗಳ ಒಳಗೆ ರಾಜಕಾಲುವೆಗಳ ನೀರು ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.

ಮಳೆ ಅವಾಂತರದ ಬಗ್ಗೆ  ಡಿಸಿಎಂ ಡಿಕೆ ಶಿವಕುಮಾರ್‌ ಟ್ವೀಟ್‌ ಮೂಲಕ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಸಮಸ್ಯೆಗಳು ನನ್ನ ಗಮನದಲ್ಲಿವೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಖರವಾಗಿ ಗಮನಿಸುತ್ತಿದ್ದೇನೆ,” ಎಂದಿದ್ದು, ಬಿಬಿಎಂಪಿ ವಾರ್ ರೂಮ್ ಹಾಗೂ ಪ್ರವಾಹಭೀತ ಸಂತ್ರಸ್ತ ಪ್ರದೇಶಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

"ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದಲ್ಲ. ಈ ಸಮಸ್ಯೆಗಳನ್ನು ಹಲವು ವರ್ಷಗಳ ಹಿಂದಿನ ನಿರ್ಲಕ್ಷ್ಯದ ಫಲಿತಾಂಶ. ಆದರೆ ಇನ್ನು ಮುಂದೆ ತಾತ್ಕಾಲಿಕ ಪರಿಹಾರ ಬಿಟ್ಟು, ದೀರ್ಘಕಾಲಿಕ ಮತ್ತು ಸಸ್ಥಿರ ಪರಿಹಾರಗಳತ್ತ ನಾವು ಹೆಜ್ಜೆ ಇಡುತ್ತೇವೆ," ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

"ನಾನು ನಿಮ್ಮೊಂದಿಗೆ ಇದ್ದೇನೆ. ನಿಮ್ಮ ಕಳವಳ ನನಗೂ ತಿಳಿದಿದೆ. ಇದು ನನ್ನ ಬದ್ಧತೆಯ ಮಾತು," ಎಂದು ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews