ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಟಿ ರನ್ಯಾರಾವ್‌ಗೆ ಇಂದು ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ರನ್ಯಾ ರಾವ್ ರನ್ನ ಬಂಧಿಸಲಾಗಿತ್ತು.
ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಇಬ್ಬರ ಶ್ಯೂರಿಟಿ ಹಾಗೂ 2 ಲಕ್ಷ ರೂ ಬಾಂಡ್ ಮೇಲೆ ನಟಿ ರನ್ಯಾರಾವ್ ಗೆ ದೇಶ ಬಿಟ್ಟು ಹೊರಗೆ ಪ್ರಯಾಣಿಸದಂತೆ ಸೂಚಿಸಿದ್ದು. ಜೊತೆಗೆ ತನಿಖೆಗಾಗಿ ಕರೆಯುವ ಪ್ರತಿ ಬಾರಿ ಹಾಜರಾಗಬೇಕು, ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ತಿಳಿಸಿ ಷರತ್ತುಬದ್ದ ಜಾಮೀನು ನೀಡಿದೆ. ಜೊತೆಗೆ ಪ್ರಕರಣದ ಎರಡನೇ ಆರೋಪಿ ತರುಣ್ ಗೂ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ. ರನ್ಯಾ ಪರವಾಗಿ ವಕೀಲ ಗಿರೀಶ್ ವಾದ ಮಂಡಿಸಿದ್ದಾರೆ.
ಇನ್ನು ಆರ್ಥಿಕ ಅಪರಾಧಗಳ ತನಿಖಾ ವಿಭಾಗ (ED) ಮತ್ತು ಕಸ್ಟಮ್ಸ್ ಅಧಿಕಾರಿಗಳ ಸಹಯೋಗದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, 60 ದಿನ ಕಳೆದರೂ ಡಿಆರ್‌ಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.