ಚಿಕ್ಕಬಳ್ಳಾಪುರ :
ಅದೊಂದು ಪುರಾತನ ದೇವಸ್ಥಾನ.. ಆದ್ರೆ ಅದು ದೇಗುಲವೋ... ಅಥವಾ ಕುಡುಕರ ಅಡ್ಡೆಯೋ… ಎಂಬಂತೆ ಮಾರ್ಪಾಡಾಗಿದೆ. ಎಲ್ಲಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಪ್ರವಾಸಿಗರಿಗೆ ಸೂಕ್ತ ಶೌಚಾಲಯ ಇಲ್ಲದೇ ಆಕ್ರೋಶ ವ್ಯಕ್ತಪಡಿಸಿದ ಭಕ್ತಾಧಿಗಳು, ಗ್ರಾಮಸ್ಥರು. ಈ ಎಲ್ಲಾ ದೃಶ್ಯಗಳು ಎಲ್ಲಾ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಸ್ಥಳ ದೇವಸ್ಥಾನದ ಬಳಿ.. ಸುಮಾರು ಶತಮಾನಗಳ ಇತಿಹಾಸ ಇರುವ ಸಾಲಿಗ್ರಾಮ ರಂಗಸ್ಥಳ ದೇವಸ್ಥಾನ ಈಗ ಪ್ರವಾಸಿಗರ ಬೇಸರಕ್ಕೆ ಕಾರಣವಾಗುತ್ತಿದೆ. ಹೌದು ಈ ದೇಗುಲದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ಹಾಗೂ ಪ್ರವಾಸಿಗರು ಬೇಸರ ವ್ಯಕ್ತಪಡಿಸ್ತಾ ಇದ್ದಾರೆ. ಅಲ್ದೇ ಪ್ರವಾಸಿಗರು ಬರಲು ಕೂಡ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆಗೆ ಒಳಪಡುವ ಐತಿಹಾಸಿಕ ದೇವಸ್ಥಾನದಲ್ಲಿ ಶೌಚಾಲಯ ಆಗಲಿ, ರಸ್ತೆ ಮಾರ್ಗ ಆಗಲಿ ಇಲ್ಲದೆ ಪ್ರವಾಸಿಗರು ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೇ ದೇವಸ್ಥಾನಕ್ಕೆ ಕಾಂಪೌಂಡ್ ವ್ಯವಸ್ಥೆ ಇಲ್ಲದ ಕಾರಣ ದೇವಸ್ಥಾನದ ಬಳಿ ಕುಡುಕರ ಅಡ್ಡೆಯಾಗಿದೆ. ದೇವಸ್ಥಾನ ಬಳಿ ಮದ್ಯದ ಬಾಟಲಿ, ಕಸ, ಹದಗೆಟ್ಟ ಶೌಚಾಲಯ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ರಂಗಸ್ಥಳ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆ,ಮುಜರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಈಗಲಾದ್ರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಭದ್ರತೆ ಕಲ್ಪಸಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಪುರಾಣ ಪ್ರಸ್ಥಿದ್ದ ಐತಿಹಾಸಿಕ ದೇವಸ್ಥಾನ ಈಗ ಸ್ವಚ್ಚತೆ, ಶೌಚಾಲಯ ಇಲ್ಲದೆ ಇರುವುದು ಒಂದು ಕಡೆಯಾದ್ರೆ ದೇವಸ್ಥಾನಕ್ಕೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಕುಡುಕರ ಅಡ್ಡೆಯಾಗುತ್ತಿದ್ದು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಿಲ್ಲದಿರುವುದು ವಿಪರ್ಯಾಸವಾಗಿದೆ.. ಇನ್ನಾದ್ರು ಅಧಿಕಾರಿಗಳು ಇತ್ತ ಗಮನ ಹರಿಸ್ತಾರಾ ಎಂದು ಕಾದುನೋಡಬೇಕಿದೆ.