ಈ ಬಾರಿ ಧೋನಿ ಖಂಡಿತವಾಗಿಯೂ IPL ನಿವೃತ್ತಿ ಹೊಂದುತ್ತಾರೆ – ಉತ್ತಪ್ಪ.

ಐಪಿಎಲ್ ಮಿನಿ ಹರಾಜು ಮುಕ್ತಾಯಗೊಂಡ ಬೆನ್ನಲ್ಲೇ, 19ನೇ ಆವೃತ್ತಿಯ IPL ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (Dhoni) ಅವರಿಗೆ ವಿದಾಯದ ಕೂಟವಾಗಲಿದೆ ಎಂದು ತಂಡದ ಮಾಜಿ ಆಟಗಾರ ಹಾಗೂ ಧೋನಿಯ ಆಪ್ತ ಸ್ನೇಹಿತ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಧೋನಿ ನಿವೃತ್ತಿ..?
ಧೋನಿ ಆಟಗಾರನಾಗಿ ನಿವೃತ್ತರಾದ ಬಳಿಕವೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ಮಾರ್ಗದರ್ಶಕ ಪಾತ್ರದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಸ್ಕೆ ತಂಡದಲ್ಲಿ ಬದಲಾವಣೆ
“ಸಿಎಸ್ಕೆ ತಂಡದ ತಂತ್ರದಲ್ಲಿ ಸ್ಪಷ್ಟ ಬದಲಾವಣೆ ಕಾಣಿಸುತ್ತಿದೆ. ಹರಾಜಿನಲ್ಲಿ ಯುವ ಆಟಗಾರರ ಮೇಲೆ ಹೆಚ್ಚು ಹೂಡಿಕೆ ಮಾಡಿರುವುದು, ಧೋನಿ ಭವಿಷ್ಯದಲ್ಲಿ ಮಾರ್ಗದರ್ಶಕನ ಪಾತ್ರಕ್ಕೆ ತಯಾರಿ ನಡೆಸುತ್ತಿರುವುದಕ್ಕೆ ಸ್ಪಷ್ಟ ಸೂಚನೆ” ಎಂದು ಉತ್ತಪ್ಪ ಹೇಳಿದರು.
ಇದನ್ನು ಓದಿ : ನೇಮಕಾತಿ ನಡೆಯುತ್ತಿಲ್ಲ ಎಂದು ಮನನೊಂದು ಉದ್ಯೋಗಾಕಾಂಕ್ಷಿ ಯುವತಿ Suicide

CSK ತಂಡದಲ್ಲಿ ಸಂಜು ಸ್ಯಾಮ್ಸನ್
ರಾಜಸ್ಥಾನ್ ರಾಯಲ್ಸ್ನಿಂದ ತಂಡಕ್ಕೆ ಆಯ್ಕೆಯಾದ ನಂತರ ಸಂಜು ಸ್ಯಾಮ್ಸನ್ ಕೂಡ CSK ತಂಡದ ಭಾಗವಾಗಿರುವ ಹಿನ್ನೆಲೆಯಲ್ಲಿ, ಧೋನಿ ಆಟಗಾರನಿಂದ ಮಾರ್ಗದರ್ಶಕರಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ಈ ಸೀಸನ್ ಧೋನಿಯ ಕೊನೆಯ ಸೀಸನ್
“ಈ ಸೀಸನ್ ಎಂಎಸ್ ಧೋನಿ ಅವರ ಕೊನೆಯ ಸೀಸನ್ ಆಗಲಿದೆ. ಅವರು ಇನ್ನೊಂದು ವರ್ಷ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಊಹಾಪೋಹಗಳಿಲ್ಲ. ಆದರೆ ಈ ವರ್ಷ ಅವರು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ” ಎಂದು ಉತ್ತಪ್ಪ ಜಿಯೋಹಾಟ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಹೆಚ್ಚು ಗಮನ ಹರಿಸಿದ್ದಾರೆ
“ಯುವ ಆಟಗಾರರ ಮೇಲಿನ ಹೂಡಿಕೆ, ಕಳೆದ ವರ್ಷದಿಂದ ಆಯ್ಕೆ ಮಾಡುತ್ತಿರುವ ತಂಡದ ರಚನೆ ನೋಡಿದಾಗ ಎಲ್ಲಾ ಲಕ್ಷಣಗಳು ಧೋನಿ ಭವಿಷ್ಯದ ಪಾತ್ರದತ್ತ ಸೂಚಿಸುತ್ತವೆ. ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು, ಅದನ್ನು ಬಹಿರಂಗಪಡಿಸುವುದು ಹಾಗೂ ಫ್ರಾಂಚೈಸಿಯೊಳಗೆ ಉಳಿಸಿಕೊಳ್ಳುವುದರ ಮೇಲೆ ಅವರು ಹೆಚ್ಚು ಗಮನ ಹರಿಸಿದ್ದಾರೆ” ಎಂದು ಉತ್ತಪ್ಪ ಹೇಳಿದರು.

ಇದನ್ನು ನೋಡಿ : ʻಲ್ಯಾಂಡ್ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್ ಅಪ್ಡೇಟ್




