ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿ ಯುವತಿ Suicide.

ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ (Dharwad) ಶಿವಗಿರಿಯಲ್ಲಿ ನಡೆದಿದೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 17 ಡಿಸೆಂಬರ್ 2025
ನೇಮಕಾತಿಗಳು ನಡೆಯುತ್ತಿಲ್ಲ ಎಂದು Suicide
ಮೃತಳನ್ನು ಬಳ್ಳಾರಿ ಮೂಲದ ಪಲ್ಲವಿ ಕಗ್ಗಲ್ (25) ಎಂದು ಗುರುತಿಸಲಾಗಿದೆ. ಪಲ್ಲವಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದುಕೊಳ್ಳುತ್ತಿದ್ದರು. ಆದರೆ ನೇಮಕಾತಿಗಳು ನಡೆಯುತ್ತಿಲ್ಲ ಎಂಬ ನಿರಾಸೆಯಿಂದ ಮನನೊಂದ ಅವರು ಶಿವಗಿರಿಯ ರೈಲ್ವೆ ಟ್ರ್ಯಾಕ್ಗೆ ಬಿದ್ದು Suicide ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ
ಇನ್ನು ಈ ಘಟನೆ ಧಾರವಾಡದ ರೇಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಇದನ್ನು ನೋಡಿ : BUS PROBLEM | KSRTC ನಿಮಗದ ಅಧ್ಯಕ್ಷರಾದ ವಾಸಣ್ಣ ಅವ್ರೆ ವಿದ್ಯಾರ್ಥಿಗಳ ಗೋಳು ಕೇಳಿ




