Dina Bhavishya : 2025 ಡಿಸೆಂಬರ್ 17ರ ಬುಧವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishya : ಮೇಷ ರಾಶಿ
ಇಂದು ನಿಮಗೆ ಸಂತೋಷದ ದಿನ. ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ವ್ಯಾಪಾರದಲ್ಲಿ ಸುಧಾರಣೆ ಕಾಣಿಸಿಕೊಳ್ಳ ಕಠಿಣ ಪರಿಶ್ರಮ ಅಗತ್ಯ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ತಾಯಿಯಿಂದ ಬೆಂಬಲ ದೊರೆಯುತ್ತದೆ.
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಹೊಣೆಗಾರಿಕೆ ಹಾಗೂ ಹೆಚ್ಚುವರಿ ಜವಾಬ್ದಾರಿಗಳು ಎದುರಾಗಬಹುದು.
ವೃಷಭ ರಾಶಿ
ಇಂದು ನಿಮಗೆ ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಖರ್ಚು ಹೆಚ್ಚಾಗಬಹುದು. ಸ್ನೇಹಿತರ ಸಹಾಯದಿಂದ ಉದ್ಯೋಗ ಅವಕಾಶ ಸಿಗುವ ಸಾಧ್ಯತೆ ಇದೆ. ಮಾತಿನಲ್ಲಿ ಸೌಮ್ಯತೆ ಕಾಣಿಸಿಕೊಳ್ಳುತ್ತದೆ.
ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಬಹುದು. ಮಕ್ಕಳ ಆರೋಗ್ಯದ ಕಡೆ ಎಚ್ಚರ ವಹಿಸಿ. ದೂರ ಪ್ರಯಾಣದ ಸಾಧ್ಯತೆಗಳಿವೆ.
ಮಿಥುನ ರಾಶಿ
ಇಂದು ತಾಳ್ಮೆ ಅಗತ್ಯ; ಮನಸ್ಸು ಅಶಾಂತವಾಗಬಹುದು. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಮಾಡಿಕೊಳ್ಳದೇ ನಿಯಂತ್ರಿಸಿದರೆ ಒಳಿತು. ವ್ಯಾಪಾರದಲ್ಲಿ ಏರಿಕೆ ಮತ್ತು ಆದಾಯ ಹೆಚ್ಚಳ ಕಂಡುಬರುತ್ತದೆ, ಸರಕಾರದ ಬೆಂಬಲವೂ ಸಿಗಲಿದೆ.
ವ್ಯವಹಾರಕ್ಕಾಗಿ ಪ್ರಯಾಣ ಸಾಧ್ಯವಾದರೂ ಕೆಲ ತೊಂದರೆಗಳು ಎದುರಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ಕಟಕ ರಾಶಿ
ಇಂದು ಗುರುವಿನ ಕೃಪೆಯಿಂದ ಧೈರ್ಯವಾಗಿ ಮುನ್ನಡೆಯಬಹುದು. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಆದಾಯ ಸಾಧ್ಯವಾದರೂ ಖರ್ಚು ಹೆಚ್ಚಾಗುವ ಲಕ್ಷಣವಿದೆ. ಮನಸ್ಸು ಸ್ವಲ್ಪ ಅಶಾಂತವಾಗಬಹುದು, ಆದರೆ ಧರ್ಮ ಹಾಗೂ ಶಿಕ್ಷಣದ ಕಡೆ ಗಮನ ಒಳ್ಳೆಯದು.
ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾತಿನಲ್ಲಿ ಸೌಮ್ಯತೆ ಇರುತ್ತದೆ, ಸ್ನೇಹಿತರ ಸಹಾಯ ಸಿಗುತ್ತದೆ ಮತ್ತು ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ.
ಸಿಂಹ ರಾಶಿ
ಇಂದು ತಾಳ್ಮೆ ಅಗತ್ಯ; ಮನಸ್ಸು ಅಶಾಂತವಾಗಬಹುದು ಮತ್ತು ಕೆಲವು ಅಡಚಣೆಗಳು ಎದುರಾಗಬಹುದು. ದೈವಬಲದಿಂದ ಸಮಯಕ್ಕೆ ಸರಿಯಾದ ಪರಿಹಾರಗಳು ಸಿಗುತ್ತವೆ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳಿದ್ದರೂ ಆತ್ಮವಿಶ್ವಾಸ ಇರುತ್ತದೆ.
ಸ್ನೇಹಿತರೊಂದಿಗೆ ಪ್ರವಾಸ, ಪ್ರಯಾಣದ ಅವಕಾಶಗಳು ಹಾಗೂ ವಾಹನ ಸೌಕರ್ಯ ಹೆಚ್ಚಾಗುವ ಸಾಧ್ಯತೆ ಇದೆ. ಕಲೆ ಮತ್ತು ಸಂಗೀತದತ್ತ ಆಸಕ್ತಿ ಮೂಡುತ್ತದೆ.
ಕನ್ಯಾ ರಾಶಿ
ಇಂದು ಮನಸ್ಸಿನಲ್ಲಿ ಸ್ವಲ್ಪ ನಿರಾಶೆ ಮತ್ತು ಅತೃಪ್ತಿ ಕಾಣಿಸಿಕೊಳ್ಳಬಹುದು. ಆದಾಯಕ್ಕೆ ಅಡೆತಡೆಗಳಾದರೂ ಗುರುಹಿರಿಯರ ಆಶೀರ್ವಾದದಿಂದ ದುಷ್ಪ್ರಭಾವ ತಪ್ಪುತ್ತದೆ. ಉದ್ಯೋಗ ಬದಲಾವಣೆ ಹಾಗೂ ಕೆಲಸದ ಜವಾಬ್ದಾರಿ ಹೆಚ್ಚುವ ಸಾಧ್ಯತೆ ಇದೆ.
ಖರ್ಚು ಹೆಚ್ಚಾಗಬಹುದು. ಮಕ್ಕಳಿಂದ ಶುಭ ಸುದ್ದಿಗಳು ಸಿಗುವ ಲಕ್ಷಣವಿದೆ. ಕೋಪ–ಸಮಾಧಾನದ ಕ್ಷಣಗಳು ಮಿಶ್ರವಾಗಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ತುಲಾ ರಾಶಿ
ಇಂದು ಭರವಸೆ ಮತ್ತು ಹತಾಶೆ ಎರಡೂ ಭಾವನೆಗಳು ಇರಬಹುದು. ಹಣದಲ್ಲಿ ಉಳಿತಾಯದ ಕಡೆ ಗಮನ ಅಗತ್ಯ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಬೆಂಬಲ ಸಿಗುತ್ತದೆ. ಸಿಹಿ ಆಹಾರದ ಆಸಕ್ತಿ ಹೆಚ್ಚಾಗುತ್ತದೆ.
ವ್ಯಾಪಾರದಲ್ಲಿ ಅನಾವಶ್ಯಕ ಓಡಾಟ ಹಾಗೂ ಆದಾಯದಲ್ಲಿ ಇಳಿಕೆ ಸಾಧ್ಯ. ಮಾತಿನಲ್ಲಿ ಕಠೋರತೆ ವಿವಾದಕ್ಕೆ ಕಾರಣವಾಗಬಹುದು, ಸಂಭಾಷಣೆಯಲ್ಲಿ ಸಮತೋಲನ ಕಾಪಾಡಿ. ಮಕ್ಕಳ ಆರೋಗ್ಯದ ಕಡೆ ಎಚ್ಚರ ವಹಿಸಿ.
ವೃಶ್ಚಿಕ ರಾಶಿ
ಇಂದು ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕಷ್ಟಕಾಲದಲ್ಲಿ ನೆರವಾಗುವುದಾಗಿ ಹೇಳಿದ್ದ ಶ್ರೀಮಂತ ಸ್ನೇಹಿತ ದೂರ ಸರಿಯಬಹುದು. ಶೈಕ್ಷಣಿಕ ಹಾಗೂ ಬೌದ್ಧಿಕ ಕೆಲಸಗಳಲ್ಲಿ ಗೌರವ ಸಿಗುತ್ತಿದ್ದು, ಅವು ಆದಾಯದ ಮೂಲವಾಗುವ ಸಾಧ್ಯತೆ ಇದೆ.
ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಬಟ್ಟೆಗಾಗಿ ಖರ್ಚು ಹೆಚ್ಚಬಹುದು. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಇದೆ.
ಧನು ರಾಶಿ
ಇಂದು ಸ್ವಯಂ ನಿಯಂತ್ರಣ ಮತ್ತು ತಾಳ್ಮೆ ಅಗತ್ಯ. ಅಡಗಿರುವ ಶಕ್ತಿಯ ಅನುಗ್ರಹದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆ ಹಾಗೂ ಹೆಚ್ಚು ಶ್ರಮ ಸಾಧ್ಯ.
ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸು ಕಂಡು ಅಧಿಕಾರಿಗಳ ಬೆಂಬಲ ಸಿಗುತ್ತದೆ. ಮನಸ್ಸಿನಲ್ಲಿ ಸ್ವಲ್ಪ ನಿರಾಶೆ ಇದ್ದರೂ ಧರ್ಮದತ್ತ ಆಸಕ್ತಿ ಹೆಚ್ಚಾಗುತ್ತದೆ.
ಮಕರ ರಾಶಿ
ಇಂದು ಉದ್ಯೋಗದಲ್ಲಿ ಬದಲಾವಣೆ ಸಾಧ್ಯ. ಗೆಳೆಯರೊಂದಿಗೆ ಕಷ್ಟ ಹಂಚಿಕೊಳ್ಳಿ, ಆದರೆ ಸ್ವಾಭಿಮಾನ ಕಾಪಾಡಿಕೊಳ್ಳಿ. ಪರೀಕ್ಷೆಯ ಕಾಲವಾದರೂ ಭಗವಂತನ ಕೃಪೆಯಿಂದ ಸಂಕಟಗಳಿಂದ ಪಾರಾಗುತ್ತೀರಿ. ಆದಾಯ ಮತ್ತು ಕೆಲಸದ ವ್ಯಾಪ್ತಿ ಹೆಚ್ಚಾಗುತ್ತದೆ, ಗೌರವ ಹಾಗೂ ಸರ್ಕಾರದ ಬೆಂಬಲ ಸಿಗಲಿದೆ. ಕುಟುಂಬದಿಂದ ದೂರವಿರುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಬಾಕಿ ಹಣ ಸಿಗುವ ಲಕ್ಷಣವಿದೆ.
ಕುಂಭ ರಾಶಿ
ಇಂದು ಮನಸ್ಸು ಅಶಾಂತವಾಗಬಹುದು; ಮಾನಸಿಕ ಶಾಂತಿ ಕಾಪಾಡಿಕೊಳ್ಳಿ. ಕುಟುಂಬದ ಜೊತೆ ಸಂತೋಷದ ಸಮಯ ಸಿಗುತ್ತದೆ ಮತ್ತು ಮನೋಕಾಮನೆಗಳು ಕ್ರಮೇಣ ನೆರವೇರುತ್ತವೆ.
ಸ್ವಭಾವದಲ್ಲಿ ಸಿಡುಕುತನ ಇದ್ದರೂ ಮಾತಿನಲ್ಲಿ ಸೌಮ್ಯತೆ ಇರಲಿ. ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಾಗಬಹುದು; ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಶಾಂತತೆ ಅಗತ್ಯ. ತಾಳ್ಮೆ ಮತ್ತು ಸಕಾರಾತ್ಮಕ ದೃಷ್ಟಿಕೋನ ನಿಮ್ಮನ್ನು ಬಲಪಡಿಸುತ್ತದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಾವಕಾಶ ಸಾಧ್ಯ. ಆರೋಗ್ಯದ ಕಡೆ ಗಮನ ಕೊಡಿ.
ಮೀನ ರಾಶಿ
ಇಂದು ಸಂಭಾಷಣೆಯಲ್ಲಿ ಸಂಯಮ ಅಗತ್ಯ. ಅಕಸ್ಮಾತ್ ಸಂಕಟ ಎದುರಾದರೂ ಧೈರ್ಯ ಕಳೆದುಕೊಳ್ಳಬೇಡಿ. ಉದ್ಯೋಗದಲ್ಲಿ ಕೆಲಸದ ಹೊರೆ ಮತ್ತು ಶ್ರಮ ಹೆಚ್ಚಾಗುವ ಸಾಧ್ಯತೆ ಇದ್ದರೂ ಪ್ರಗತಿ ಸುಗಮವಾಗಿರುತ್ತದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಬಹುದು. ಕೋಪ–ಸಮಾಧಾನದ ಕ್ಷಣಗಳು ಮಿಶ್ರವಾಗಿದ್ದು, ಕೌಟುಂಬಿಕ ಸಮಸ್ಯೆಗಳಿದ್ದರೂ ಸಹೋದರರಿಂದ ಬೆಂಬಲ ಸಿಗುತ್ತದೆ.




