CSK Captain : ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 15 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

19ನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ.
IPL 2026 ರಲ್ಲಿ ಧೋನಿ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ
ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್ CSKಗೆ ಟ್ರೇಡ್ ಆದರೂ, ಅವರಿಗೆ ನಾಯಕತ್ವ ನೀಡಲಾಗುವುದಿಲ್ಲ ಎಂದು CSK ತಿಳಿಸಿದೆ. ಇದರಿಂದ, ಧೋನಿ ತಂಡವನ್ನು ಮುನ್ನಡೆಸುವೆ ಎಂದು ನಿರೀಕ್ಷಿಸಿರುವ ಅಭಿಮಾನಿಗಳಲ್ಲಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಈ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ IPL 2026ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಸಹ ಫ್ರಾಂಚೈಸಿ ಖಚಿತಪಡಿಸಿದೆ.
ಇದನ್ನು ಓದಿ : Nelamangala : ರಿವರ್ಸ್ ತೆಗೆಯುವಾಗ ಕಾರು ಹರಿದು ಮಗು ಸಾವು
CSK ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರುತುರಾಜ್
ರುತುರಾಜ್ ಗಾಯಕ್ವಾಡ್ 2024ರಲ್ಲಿ CSK ನಾಯಕನಾಗಿ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಅವರು ತಂಡವನ್ನು ಮುನ್ನಡೆಸಲಿಲ್ಲ. ಆ ಸಂದರ್ಭದಲ್ಲಿ ಧೋನಿ ತಂಡವನ್ನು ಮುನ್ನಡೆಸಿದ್ದರು. ಆದರೆ 2026 ಸೀಸನ್ನಲ್ಲಿ ರುತುರಾಜ್ ಗಾಯಕ್ವಾಡ್ CSK ತಂಡದ ಅಧಿಕೃತ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
ಇದು CSK ಅಭಿಮಾನಿಗಳಿಗೆ ಹೊಸ ಉತ್ಸಾಹವನ್ನು ತಂದಿರುವುದು ಹಾಗೂ ತಂಡದ ಮುಂದೆ IPL 2026 ರಲ್ಲಿ ರೋಚಕ ಪೋರಾಟವನ್ನು ನಿರೀಕ್ಷಿಸಬಹುದಾಗಿದೆ.
ಇದನ್ನು ನೋಡಿ : 11 ಕೋಟಿಯಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ ಮಧುಗಿರಿಯಲ್ಲಿ ರಾಜಣ್ಣ ಏನ್ ಹೇಳಿದ್ರು ಗೊತ್ತಾ




