KSP Recruitment 2026 : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್.

KSP Recruitment 2026 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದ ಹಾಗೂ ಮಿಕ್ಕುಳಿದ ವೃಂದ (RPC) ಸೇರಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 8ರಿಂದ ಆರಂಭವಾಗಲಿದೆ.
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3 ಆಗಿದೆ.
ಹುದ್ದೆಗಳ ವಿವರ
ಮಿಕ್ಕುಳಿದ ವೃಂದ (RPC): 3,395 ಹುದ್ದೆಗಳು
- ಪುರುಷರು: 2,266
- ಮಹಿಳೆಯರು: 755
- ಸೇವಾನಿರತ ಪುರುಷರು: 257
- ಸೇವಾನಿರತ ಮಹಿಳೆಯರು: 82
- ತೃತೀಯ ಲಿಂಗ ಅಭ್ಯರ್ಥಿಗಳು: 35
ಕಲ್ಯಾಣ ಕರ್ನಾಟಕ ವೃಂದ: 596 ಹುದ್ದೆಗಳು
- ಪುರುಷರು: 398
- ಮಹಿಳೆಯರು: 133
- ಸೇವಾನಿರತ ಪುರುಷರು: 46
- ಸೇವಾನಿರತ ಮಹಿಳೆಯರು: 14
- ತೃತೀಯ ಲಿಂಗ ಅಭ್ಯರ್ಥಿಗಳು: 5
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷ ನಿಗದಿಪಡಿಸಲಾಗಿದೆ.
ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ:
- SC/ST, ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ 2 ವರ್ಷ
- ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ 5 ವರ್ಷ
ಇದನ್ನು ಓದಿ : ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

ಅರ್ಜಿ ಶುಲ್ಕ
- ಸಾಮಾನ್ಯ ಹಾಗೂ ಇತರೆ ಪ್ರವರ್ಗ: ₹750
- SC/ST, ಪ್ರವರ್ಗ-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು: ₹500
ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಕಂಡ ಹಂತಗಳ ಆಧಾರದಲ್ಲಿ ನಡೆಯಲಿದೆ:
- ಲಿಖಿತ ಪರೀಕ್ಷೆ
- ಎಂಡ್ಯೂರನ್ಸ್ ಟೆಸ್ಟ್
- ದೈಹಿಕ ಸಾಮರ್ಥ್ಯ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
100 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ಸ್ವಾತಂತ್ರ್ಯ ಹೋರಾಟ, ಮಾನಸಿಕ ಸಾಮರ್ಥ್ಯ ಹಾಗೂ ನೈತಿಕ ಶಿಕ್ಷಣ ವಿಷಯಗಳ ಪ್ರಶ್ನೆಗಳು ಇರಲಿವೆ.
ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇರಲಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಉತ್ತರಿಸಬೇಕು. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕ ಗಳಿಸುವುದು ಕಡ್ಡಾಯವಾಗಿದೆ.
ಪರೀಕ್ಷೆ ಮತ್ತು ವೇತನ
ಲಿಖಿತ ಪರೀಕ್ಷೆ ಆಗಸ್ಟ್ 2ರಂದು ನಡೆಯಲಿದ್ದು, ಕಡ್ಡಾಯ ಕನ್ನಡ ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹37,500 ರಿಂದ ₹76,100ರವರೆಗೆ ವೇತನ ದೊರೆಯಲಿದೆ.

ಇದನ್ನು ನೋಡಿ : ಕಾವೇರಿದ ಭೂ ಸ್ವಾಧೀನ ವಿವಾದ – ANAND GURUJI ಮೇಲೆ ಆರೋಪ.!?




