D.K ಶಿವಕುಮಾರ್ ಅಭಿಮಾನಿ ಪಾದಯಾತ್ರೆ.

ರಾಮನಗರ : D.K ಶಿವಕುಮಾರ್ ಅವರು ಸಿಎಂ ಆಗಲೆಂದು ಕಾಂಗ್ರೆಸ್ ಕಾರ್ಯಕರ್ತ ಮುತ್ತುರಾಯಪ್ಪ ಅವರು ತಮ್ಮ ಹರಕೆ ಈಡೇರಿದ ಹಿನ್ನಲೆ, ವಿಶೇಷ ಪಾದಯಾತ್ರೆ ಕೈಗೊಂಡಿದ್ದಾರೆ. ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾಗಿರುವ ಮುತ್ತುರಾಯಪ್ಪ, ಗಾಂಧೀಜಿ ವೇಷ ಧರಿಸಿ ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ.

ತಮ್ಮ ಹರಕೆ ಈಡೇರಿರೋದ್ರಿಂದ ಪಾದಯಾತ್ರೆ
ಕಳೆದ ವರ್ಷವೇ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಅಂತ ಕೇರಳದ ವಯನಾಡಿನ ಶಿವ ದೇವಸ್ಥಾನ ಹಾಗೂ ಕನಕಪುರದ ಕೆಂಕೇರಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ತಮ್ಮ ಹರಕೆ ಈಡೇರಿರೋದ್ರಿಂದ ಪಾದಯಾತ್ರೆ ಮಾಡ್ತಿದ್ದಾರೆ.
ಇದನ್ನು ಓದಿ : Ramanagara ದಲ್ಲಿ ರಾರಾಜಿಸುತ್ತಿವೆ ಡಿಕೆಶಿ ಕಟೌಟ್, ಬ್ಯಾನರ್ಗಳು..!!

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ತಮ್ಮ ಹರಕೆಯಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನನ್ನ ಆಸೆ ಮತ್ತು ನಾನು ದೇವರಿಗೆ ಹರಸಿಕೊಂಡಿದ್ದ ಹರಕೆ ಈಡೇರಿದ್ದರಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆ,ಭಾರತ್ ಜೋಡೋ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆದ ಪಾದಯಾತ್ರೆಯಲ್ಲಿ ಗಾಂಧೀಜಿವೇಷ ಧರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದಾಗಿ ಮುತ್ತುರಾಯಪ್ಪ ತಿಳಿಸಿದರು.

ಇದನ್ನು ನೋಡಿ : SUMALATH AMBARISH ಮೇಡಂಗೆ ರಾಜ್ಯಸಭಾ ಟಿಕೆಟ್ ಸಿಗುತ್ತಾ ಸರ್.!




