Job Alert : ಬ್ಯಾಂಕಿಂಗ್ ಕ್ಷೇತ್ರದಲ್ಲಿ 11,403 ಹುದ್ದೆಗಳ ಬಂಪರ್ ನೇಮಕಾತಿ; ಕರ್ನಾಟಕದಲ್ಲೇ 1,414 ಹುದ್ದೆಗಳು!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಭರ್ಜರಿ ಅವಕಾಶ ನೀಡಿದೆ. ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಖಾಲಿ ಇರುವ 11,403 ಗ್ರಾಹಕ ಸೇವಾ ಸಹವರ್ತಿ (Customer Service Associate – CSA) ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಹಿಂದಿನ IBPS Clerk ಹುದ್ದೆಯನ್ನು 2024ರಿಂದ Customer Service Associate (CSA) ಎಂದು ಮರುನಾಮಕರಣ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 21, 2026ರೊಳಗೆ IBPS ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕದಲ್ಲಿ 1,414 ಹುದ್ದೆಗಳು
ರಾಜ್ಯವಾರು ಹುದ್ದೆಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 1,731 ಹುದ್ದೆಗಳಿದ್ದರೆ, ಕರ್ನಾಟಕದಲ್ಲಿ 1,414 ಹುದ್ದೆಗಳು ಭರ್ತಿಯಾಗಲಿವೆ. ಜೊತೆಗೆ:
- ಉತ್ತರ ಪ್ರದೇಶ – 1,731
- ಕರ್ನಾಟಕ – 1,414
- ಮಹಾರಾಷ್ಟ್ರ – 1,051
- ಪಶ್ಚಿಮ ಬಂಗಾಳ – 946
- ದೆಹಲಿ-ಎನ್ಸಿಆರ್ – 415
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇತರ ಭತ್ಯೆಗಳೊಂದಿಗೆ ಆರಂಭಿಕ ಮೂಲ ವೇತನ ಸುಮಾರು ₹24,050 ದೊರೆಯಲಿದೆ.
ಇದನ್ನು ಓದಿ : ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆ (ಕರ್ನಾಟಕಕ್ಕೆ ಕನ್ನಡ) ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
ವಯೋಮಿತಿ
- ಕನಿಷ್ಠ: 20 ವರ್ಷ
- ಗರಿಷ್ಠ: 28 ವರ್ಷ
- ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯ.
ಪರೀಕ್ಷಾ ಮಾದರಿಯಲ್ಲಿ ಬದಲಾವಣೆ
ಈ ಬಾರಿ ಪ್ರಾಥಮಿಕ ಪರೀಕ್ಷೆ (Prelims) ಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮುಖ್ಯ ಪರೀಕ್ಷೆ (Mains) ಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
- ಪ್ರಶ್ನೆಗಳ ಸಂಖ್ಯೆ: 155ರಿಂದ 160ಕ್ಕೆ ಹೆಚ್ಚಳ
- ಪರೀಕ್ಷಾ ಸಮಯ: 120 ನಿಮಿಷಗಳಿಂದ 125 ನಿಮಿಷಗಳಿಗೆ ಹೆಚ್ಚಳ
- ಪರಿಮಾಣಾತ್ಮಕ ಸಾಮರ್ಥ್ಯ (Quantitative Aptitude) ವಿಭಾಗದಲ್ಲಿ 35ರಿಂದ 40 ಪ್ರಶ್ನೆಗಳು
ಪ್ರಾಥಮಿಕ ಪರೀಕ್ಷೆ: ಅಕ್ಟೋಬರ್ 2026
ಮುಖ್ಯ ಪರೀಕ್ಷೆ: ಡಿಸೆಂಬರ್ 2026
ಆಯ್ಕೆ ಪ್ರಕ್ರಿಯೆ
- ಪ್ರಾಥಮಿಕ ಪರೀಕ್ಷೆ (ಅರ್ಹತಾ ಸ್ವರೂಪ)
- ಮುಖ್ಯ ಪರೀಕ್ಷೆ (ಅಂತಿಮ ಮೆರಿಟ್ಗೆ ಪರಿಗಣನೆ)
- ಅಗತ್ಯವಿದ್ದರೆ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)
ಅರ್ಜಿ ಶುಲ್ಕ
- SC/ST/PwD/ಮಾಜಿ ಸೈನಿಕರು: ₹175
- General/OBC/EWS: ₹850
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹರು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರವೇ ಅರ್ಜಿ ಸಲ್ಲಿಸುವುದು ಸೂಕ್ತ.

ಇದನ್ನು ನೋಡಿ : ಸಿಎಂ ಡಿ.ಕೆ ಶಿವಕುಮಾರ್ ನಡವಳಿಕೆ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಹೀಗ್ಯಾಕಂದ್ರು




