ಈ ಬಾರಿಯ ಐಪಿಎಲ್ನಲ್ಲಿ Vaibhav Sooryavanshi ಗಳಿಸಿದ ಆದಾಯವೆಷ್ಟು?

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ 2026ರ IPL 2026 ಟೂರ್ನಿಯಲ್ಲಿ ತಮ್ಮ ಸ್ಪೋಟಕ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಐಪಿಎಲ್ಗೆ ಪ್ರವೇಶಿಸಿದ ಈ ಯುವ ಆಟಗಾರ ಈ ಸೀಸನ್ನಲ್ಲಿ ಐದು ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಆರೆಂಜ್ ಕ್ಯಾಪ್ ಸೇರಿ ಒಟ್ಟು 5 ಪ್ರಶಸ್ತಿ
ಹೌದು.. ಐಪಿಎಲ್ 2026ರಲ್ಲಿ ಒಟ್ಟು 776 ರನ್ಗಳನ್ನು ಗಳಿಸಿರುವ Vaibhav Sooryavanshi ಆರೆಂಜ್ ಕ್ಯಾಪ್ ಸೇರಿದಂತೆ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ವೃತ್ತಿ ಬದುಕಿನ ದಿಕ್ಕನ್ನೇ ಬದಲಿಸಿಕೊಂಡಿದ್ದಾರೆ.

5 ಪ್ರಮುಖ ಪ್ರಶಸ್ತಿಗಳು
ವೈಭವ್ ಸೂರ್ಯವಂಶಿ ಈ ಸೀಸನ್ನಲ್ಲಿ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದ್ದಾರೆ.
- ಅತ್ಯಂತ ಮೌಲ್ಯಯುತ ಆಟಗಾರ: Rs 15 ಲಕ್ಷ ರೂ.
- ಆರೆಂಜ್ ಕ್ಯಾಪ್ (ಟೂರ್ನಿಯಲ್ಲಿ ಅತಿ ಹೆಚ್ಚು ರನ್): Rs 10 ಲಕ್ಷ ರೂ.
- ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್: Rs 10 ಲಕ್ಷ ರೂ. (ಇದರ ಜೊತೆಗೆ ಟಾಟಾ ಸಿಯಾರಾ ಕಾರು)
- ಸೂಪರ್ ಸಿಕ್ಸರ್ ಆಫ್ ದ ಸೀಸನ್: Rs 10 ಲಕ್ಷ ರೂ. (72 ಸಿಕ್ಸರ್)
- ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: Rs 10 ಲಕ್ಷ ರೂ.
ಈ ಐದು ಪ್ರಶಸ್ತಿಗಳಿಂದ ವೈಭವ್ ಒಟ್ಟು ₹55 ಲಕ್ಷ ಬಹುಮಾನ ಪಡೆದಿದ್ದಾರೆ.
ಇದನ್ನು ಓದಿ : RCB ಸಂಭ್ರಮದ ಬಳಿಕ ಭೀಕರ ಅಪಘಾತ – ಮನೆಗೆ ಮರಳುತ್ತಿದ್ದ ಅಭಿಮಾನಿ ಸಾವು

ಪಂದ್ಯದ ಸಂಭಾವನೆ ಮತ್ತು ಹೆಚ್ಚುವರಿ ಆದಾಯ
ರಾಜಸ್ಥಾನ್ ರಾಯಲ್ಸ್ ಪರ 16 ಪಂದ್ಯಗಳನ್ನು ಆಡಿದ ವೈಭವ್ ಸೂರ್ಯವಂಶಿ, ಪ್ರತಿ ಪಂದ್ಯಕ್ಕೂ ₹7.5 ಲಕ್ಷ ಸಂಭಾವನೆ ಪಡೆದು ಒಟ್ಟು ₹1.20 ಕೋಟಿ ಗಳಿಸಿದ್ದಾರೆ. ಇದರ ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಸೇರಿದಂತೆ ಇತರ ವೈಯಕ್ತಿಕ ಪ್ರಶಸ್ತಿಗಳಿಂದಲೂ ಅವರು ಹೆಚ್ಚುವರಿ ಆದಾಯ ಪಡೆದಿದ್ದಾರೆ.
ಒಟ್ಟು ಸಂಪಾದನೆ ₹2.50 ಕೋಟಿ
ಈ ಎಲ್ಲಾ ಆದಾಯಗಳನ್ನು ಸೇರಿಸಿದರೆ, ವೈಭವ್ ಸೂರ್ಯವಂಶಿ 2026ರ ಐಪಿಎಲ್ ಸೀಸನ್ನಲ್ಲಿ ಒಟ್ಟು ಸುಮಾರು ₹2.50 ಕೋಟಿ ಸಂಪಾದನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




