HEMAVATHI DAM : ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು (Heavy Rain) ಯಾವುದೇ ಸಮಯದಲ್ಲಿ ಡ್ಯಾಂನಿಂದ ನದಿಗೆ ನೀರು ಹೊರಬಿಡುವ ಸಾಧ್ಯತೆಯಿದೆ.

HEMAVATHI DAM: ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಹೇಮಾವತಿ ಅಣೆಕಟ್ಟಿನಿಂದ ನದಿಗೆ ನೀರು ಹೊರಬಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆ (IMD) ಅಕ್ಟೋಬರ್ 29ರವರೆಗೆ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದರಿಂದಾಗಿ ನದಿ ಪಾತ್ರ ಹಾಗೂ ದಂಡೆಯ ಸಮೀಪದ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : Cricket: ಹಾಂಕಾಂಗ್ ಕ್ರಿಕೆಟ್ ಸಿಕ್ಸಸ್ ನಲ್ಲಿ ಭಾರತ – ಪಾಕಿಸ್ತಾನ ಮುಖಾಮುಖಿ!
ಇನ್ನು ಹೇಮಾವತಿ ಜಲಾಶಯ 37.103 ಟಿಎಂಸಿ ನೀರಿನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಸದ್ಯ 36.620 ಟಿಎಂಸಿ ನೀರು ಸಂಗ್ರಹವಾಗಿದೆ. ಅಲ್ದೇ ಒಳಹರಿವು 16,394 ಕ್ಯೂಸೆಕ್ ಇದ್ದು, ಹೊರಹರಿವು: 4,600 ಕ್ಯೂಸೆಕ್ ಆಗಿದೆ. ಹೇಮಾವತಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪುತ್ತಿರುವುದರಿಂದ ಯಾವುದೇ ವೇಳೆಯಲ್ಲಿ ಬೇಕಾದರೂ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯುವ ಸಾಧ್ಯತೆ ಇದೆ.
MUST WATCH : TB JAYACHANDRA | ಡಿಕೆಶಿ ಸಂಕಲ್ಪ ಪೂಜೆಗೆ ಜಯಚಂದ್ರ ಕೌಂಟರ್ ? – ಡಿಸಿಎಂ ಮೇಲೆ ಶಾಸಕ ಮುನಿಸಿಕೊಂಡ್ರಾ ?




