Gold Rate ನಲ್ಲಿಂದು ಭಾರೀ ಇಳಿಕೆ – ಬೆಲೆ ಇಲ್ಲಿದೆ ಚೆಕ್ ಮಾಡಿ

ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗೆ ಇದು ಸಂತಸದ ವಿಚಾರವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ Gold Rate ನಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ.
22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 190 ರೂಪಾಯಿ ಇಳಿಕೆಯಾಗಿದ್ದು, ಇದೀಗ 13,375 ರೂಪಾಯಿಗೆ ಲಭ್ಯವಾಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 207 ರೂಪಾಯಿ ಇಳಿಕೆಯಾಗಿ 14,591 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ ಚಿನ್ನ
- 1 ಗ್ರಾಂ – ₹13,375
- 8 ಗ್ರಾಂ – ₹1,07,000
- 10 ಗ್ರಾಂ – ₹1,33,750
- 100 ಗ್ರಾಂ – ₹13,37,500
24 ಕ್ಯಾರಟ್ ಚಿನ್ನ
- 1 ಗ್ರಾಂ – ₹14,591
- 8 ಗ್ರಾಂ – ₹1,16,728
- 10 ಗ್ರಾಂ – ₹1,45,910
- 100 ಗ್ರಾಂ – ₹14,59,100

ಪ್ರಮುಖ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,375 | ₹14,591 |
| ಮುಂಬೈ | ₹13,375 | ₹14,591 |
| ದೆಹಲಿ | ₹13,375 | ₹14,591 |
| ಕೋಲ್ಕತಾ | ₹13,375 | ₹14,591 |
| ಹೈದರಾಬಾದ್ | ₹13,375 | ₹14,591 |
ಬೆಳ್ಳಿ ದರದಲ್ಲೂ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಬೆಳ್ಳಿಯ ದರ ಹೀಗಿದೆ:
- 1 ಗ್ರಾಂ ಬೆಳ್ಳಿ – ₹245
- 10 ಗ್ರಾಂ ಬೆಳ್ಳಿ – ₹2,450
- 1 ಕೆಜಿ ಬೆಳ್ಳಿ – ₹2,45,000
ಇದನ್ನು ಓದಿ : ಚಿನ್ನದ ದರದಲ್ಲಿಂದು ಮತ್ತೆ ಏರಿಕೆ – ರೇಟ್ ಚೆಕ್ ಮಾಡಿ

ಖರೀದಿಗೆ ಇದು ಸೂಕ್ತ ಸಮಯವೇ?
ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿರುವುದರಿಂದ ಮದುವೆ, ಶುಭ ಸಮಾರಂಭಗಳು ಹಾಗೂ ಹೂಡಿಕೆ ಉದ್ದೇಶಕ್ಕಾಗಿ ಚಿನ್ನ ಖರೀದಿಸಲು ಯೋಜಿಸಿರುವವರಿಗೆ ಇದು ಅನುಕೂಲಕರ ಸಮಯವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ನೋಡಿ : ಗೃಹ ಸಚಿವರ ಹೇಳಿಕೆಗೆ ಅನುಮಾನ ಬರ್ತಿದೆ – ಹೀಗ್ಯಾಕಂದ್ರು ಸಂಸದ YADUVEER WADIYA.?




