Gold Rate 10 ಗ್ರಾಮ್ಗೆ 400 ರೂ ಏರಿಕೆ – ಇಲ್ಲಿದೆ ದರಪಟ್ಟಿ

ಕಳೆದ ವಾರಾಂತ್ಯದಲ್ಲಿ ಗ್ರಾಮ್ಗೆ ₹20 ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ₹40 ಹೆಚ್ಚಳ ಕಂಡಿದೆ. ಇದರೊಂದಿಗೆ ದೇಶಾದ್ಯಂತ ಚಿನ್ನದ ದರಗಳು ಹೊಸ ಎತ್ತರದತ್ತ ಸಾಗುತ್ತಿದ್ದು, 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹11,000ರ ಸಮೀಪ ತಲುಪಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,34,300 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹1,46,510ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 100 ಗ್ರಾಮ್ ಬೆಳ್ಳಿ ಬೆಲೆ ₹25,000ರಲ್ಲೇ ಸ್ಥಿರವಾಗಿದೆ.

ಭಾರತದಲ್ಲಿನ ಚಿನ್ನದ ದರ (ಜೂನ್ 22)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,651
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,430
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,988
- ಬೆಳ್ಳಿ (1 ಗ್ರಾಂ): ₹250
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,430 ಆಗಿದ್ದು, 24 ಕ್ಯಾರಟ್ ಚಿನ್ನದ ದರ ₹14,651 ಇದೆ. ಬೆಳ್ಳಿ ದರ ಪ್ರತಿ ಗ್ರಾಂಗೆ ₹250 ಆಗಿದೆ.
ಇದನ್ನು ಓದಿ : Gold & Silver Rate : ವಾರಾಂತ್ಯದಲ್ಲಿ ಚಿನ್ನದ ದರ ಏರಿಕೆ

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಂ)
- ಚೆನ್ನೈ: 13,600 ರೂ
- ಮುಂಬೈ: 13,430 ರೂ
- ದೆಹಲಿ: 13,445 ರೂ
- ಕೋಲ್ಕತಾ: 13,430 ರೂ
- ಕೇರಳ: 13,430 ರೂ
- ಅಹ್ಮದಾಬಾದ್: 13,435 ರೂ
- ಜೈಪುರ್: 13,445 ರೂ
- ಲಕ್ನೋ: 13,445 ರೂ
ವಿದೇಶಗಳಲ್ಲಿ ಚಿನ್ನದ ದರ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಕೆಲವು ದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಏರಿಳಿತ ದಾಖಲಾಗಿದೆ.
- ಮಲೇಷ್ಯಾ: 575 ರಿಂಗಿಟ್ (13,051 ರುಪಾಯಿ)
- ದುಬೈ: 500.75 ಡಿರಾಮ್ (12,871 ರುಪಾಯಿ)
- ಅಮೆರಿಕ: 137 ಡಾಲರ್ (12,935 ರುಪಾಯಿ)
- ಸಿಂಗಾಪುರ: 185 ಸಿಂಗಾಪುರ್ ಡಾಲರ್ (13,511 ರುಪಾಯಿ)
- ಕತಾರ್: 502 ಕತಾರಿ ರಿಯಾಲ್ (13,002 ರೂ)
- ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,955 ರುಪಾಯಿ)
- ಓಮನ್: 52.65 ಒಮಾನಿ ರಿಯಾಲ್ (12,911 ರುಪಾಯಿ)
- ಕುವೇತ್: 41.94 ಕುವೇತಿ ದಿನಾರ್ (12,872 ರುಪಾಯಿ)

ಬೆಳ್ಳಿ ದರ ಸ್ಥಿರ
ದೇಶದ ಬಹುತೇಕ ನಗರಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹250ರಷ್ಟೇ ಇದೆ. ಆದರೆ ಚೆನ್ನೈ ಹಾಗೂ ಕೇರಳ, ಭುವನೇಶ್ವರ್ನಲ್ಲಿ ಪ್ರತಿ ಗ್ರಾಂ ಬೆಳ್ಳಿ ದರ ₹255 ದಾಖಲಾಗಿದೆ.
ಸೂಚನೆ: ಚಿನ್ನ ಮತ್ತು ಬೆಳ್ಳಿ ದರಗಳು ವಿವಿಧ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದ್ದು, ಸ್ಥಳೀಯ ಮಾರುಕಟ್ಟೆ, ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಹಾಗೂ ಇತರೆ ಶುಲ್ಕಗಳ ಆಧಾರದ ಮೇಲೆ ಅಂತಿಮ ದರದಲ್ಲಿ ವ್ಯತ್ಯಾಸವಾಗಬಹುದು.

ಇದನ್ನು ನೋಡಿ : ಪ್ರೀತಿಸಿ ಮದುವೆ ಆಗಿದ್ದ ವಿವಾಹಿತೆಯ ಶ ಪತ್ತೆ ಗಂಡನ ಮನೆಯವರೇ ಕೊಂ ನೇಣು ಹಾಕಿದ್ರಾ




