ಸರ್ಕಾರಿ ನೌಕರರ ಕುಟುಂಬಗಳ Guarntee ಕಡಿತಕ್ಕೆ ಚಿಂತನೆ.!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಕುರಿತು ಇದೀಗ ಹೊಸ ಚರ್ಚೆ ಶುರುವಾಗಿದೆ.
ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರಿ ನೌಕರರ ಕುಟುಂಬಗಳನ್ನು ಈ ಯೋಜನೆಗಳಿಂದ ಹೊರಗಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದೆ ಎನ್ನಲಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಇಲ್ವಾ ಗ್ಯಾರಂಟಿ?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪರಿಷ್ಕರಣೆಯ ಕುರಿತು ಗ್ಯಾರಂಟಿ ಪ್ರಾಧಿಕಾರ ಚರ್ಚೆ ನಡೆಸುತ್ತಿದ್ದು, ಸರ್ಕಾರಿ ನೌಕರರನ್ನು ಗ್ಯಾರಂಟಿ ಸೌಲಭ್ಯಗಳಿಂದ ಹೊರಗಿಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಈ ಕುರಿತು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಜಿಎಸ್ಟಿ ಪಾವತಿಸುವವರು ಹಾಗೂ ಆದಾಯ ತೆರಿಗೆ ಪಾವತಿಸುವವರಿಗೆ ಗ್ಯಾರಂಟಿ ಸೌಲಭ್ಯ ನೀಡಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕುರಿತು ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಮತದಾನದ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಎಂದ ಸಿಎಂ DK Shivakumar..!!

ಸರ್ಕಾರಿ ನೌಕರರ ಕುಟುಂಬಗಳ ಗ್ಯಾರಂಟಿ ಕಡಿತಕ್ಕೆ ಚಿಂತನೆ
ಇನ್ನು Guarntee ಯೋಜನೆಗಳ ಫಲಾನುಭವಿಗಳ ಪಟ್ಟಿಯ ಮರುಪರಿಶೀಲನೆಯಲ್ಲಿ ಆರ್ಥಿಕವಾಗಿ ಸದೃಢರಾಗಿರುವ ವರ್ಗಗಳು ಸ್ವಯಂಪ್ರೇರಿತವಾಗಿ ಯೋಜನೆಗಳಿಂದ ಹೊರಬರಬಹುದೇ ಎಂಬ ಆಯಾಮದಲ್ಲೂ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘ ಹಾಗೂ ಇತರೆ ಸಂಘಟನೆಗಳ ಅಭಿಪ್ರಾಯ ಪಡೆಯಲು ಪ್ರಾಧಿಕಾರ ಮುಂದಾಗಿದೆ.
ಫಲಾನುಭವಿಗಳ ಮರುಪರಿಶೀಲನೆ ಕುರಿತು ಚರ್ಚೆ
ಒಟ್ನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮರುಪರಿಶೀಲನೆ ಕುರಿತು ಸರ್ಕಾರದಲ್ಲಿ ಚರ್ಚೆ ಆರಂಭವಾಗಿದ್ದು, ಸರ್ಕಾರಿ ನೌಕರರನ್ನು ಯೋಜನೆಗಳಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗುತ್ತಾ ಅಥವಾ ಸ್ವಯಂಪ್ರೇರಿತ ಮಾದರಿಯನ್ನೇ ಅನುಸರಿಸಲಾಗುತ್ತಾ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಇದನ್ನು ನೋಡಿ : ಗುರು ದೇವೋ ಭವ ಅಂತಾರೆ- ಆದ್ರೆ ಕಾಲಿಗೆ ಬಿದ್ದರೂ ಕರಗದ ಕಟುಕ ಅಧ್ಯಾಪಕರು ಇವರು? ಇವ್ರು ಏನ್ಮಾಡಿದ್ರು ಗೊತ್ತಾ?




