ರಾಜ್ಯದ 108 Ambulance ಚಾಲಕರಿಗೆ ಡೆಡ್ ಲೈನ್ : 15 ನಿಮಿಷದಲ್ಲಿ ಸ್ಥಳಕ್ಕೆ ಬರದಿದ್ರೆ 5 ಸಾವಿರ ದಂಡ ಫಿಕ್ಸ್!

ರಾಜ್ಯದ ತುರ್ತು ವೈದ್ಯಕೀಯ ಸೇವೆಯಲ್ಲಿ ಭಾರಿ ಸುಧಾರಣೆ ತರಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಅಪಘಾತ ಅಥವಾ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ 108 ಆಂಬುಲೆನ್ಸ್ಗೆ ಕರೆ ಬಂದ ಬಳಿಕ 15 ನಿಮಿಷಗಳೊಳಗೆ ಸ್ಥಳಕ್ಕೆ ತಲುಪುವುದು ಕಡ್ಡಾಯವಾಗಿದ್ದು, ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ವಿಫಲವಾದರೆ ಸಂಬಂಧಪಟ್ಟ ಆಂಬುಲೆನ್ಸ್ ಏಜೆನ್ಸಿಗೆ ₹5,000 ದಂಡ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.
ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ಸರ್ಕಾರ ಸಹಿಸುವುದಿಲ್ಲ
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ತುರ್ತು ವೈದ್ಯಕೀಯ ಸೇವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿತನವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕರಿಗೆ ತ್ವರಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಈ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.
ಇದನ್ನು ಓದಿ : ಕರಾವಳಿಯಲ್ಲಿ ಮೊದಲ ಬೋಟ್ Ambulance ನಿರ್ಮಾಣ.!

ದಂಡದ ಸಂಪೂರ್ಣ ಹೊಣೆಯನ್ನು ಆಂಬುಲೆನ್ಸ್ ಏಜೆನ್ಸಿಯೇ
ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತಲುಪಿಸುವುದು ಆಂಬುಲೆನ್ಸ್ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದ್ದು, ಟ್ರಾಫಿಕ್ ಸೇರಿದಂತೆ ಅನಗತ್ಯ ಕಾರಣಗಳನ್ನು ಮುಂದಿಟ್ಟು ವಿಳಂಬ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ನಿಗದಿತ ಸಮಯ ಮೀರಿದರೆ ಅದರ ಹೊಣೆಗಾರಿಕೆಯನ್ನು ಸಂಬಂಧಿಸಿದ Ambulance ಏಜೆನ್ಸಿಯೇ ಹೊತ್ತು ದಂಡ ಪಾವತಿಸಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸುಸ್ಥಿತಿಯಲ್ಲಿಲ್ಲದ ಎಲ್ಲ Ambulance ವಾಹನಗಳನ್ನು ಗುಜರಿಗೆ
ಇದರ ಜೊತೆಗೆ, ರಾಜ್ಯದಲ್ಲಿ ಸೇವೆಯಲ್ಲಿರುವ ಹಳೆಯ ಹಾಗೂ ಸುಸ್ಥಿತಿಯಲ್ಲಿಲ್ಲದ 108 ಆಂಬುಲೆನ್ಸ್ಗಳನ್ನು ಹಂತ ಹಂತವಾಗಿ ಸೇವೆಯಿಂದ ಹೊರಗಿಟ್ಟು ಸ್ಕ್ರ್ಯಾಪ್ ಮಾಡಲು ಸರ್ಕಾರ ಸೂಚನೆ ನೀಡಿದೆ.
ಅವುಗಳ ಬದಲಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಆಂಬುಲೆನ್ಸ್ಗಳನ್ನು ಖರೀದಿಸಿ ತುರ್ತು ವೈದ್ಯಕೀಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ.

ಸರ್ಕಾರದ ಈ ಕಠಿಣ ನಿಯಮದಿಂದಾಗಿ ಇನ್ಮುಂದೆ ಸಕಾಲದಲ್ಲಿ ವೈದ್ಯಕೀಯ ನೆರವು ಸಿಗಲಿದ್ದು, ಅಮೂಲ್ಯ ಜೀವಗಳು ಉಳಿಯಲಿವೆ ಎಂದು ನಿರೀಕ್ಷಿಸಲಾಗಿದೆ.
ಇದನ್ನು ನೋಡಿ : ಯುವತಿಯರ ಜೊತೆ ಪೊಲೀಸಪ್ಪನ ಪೋಲಿ ಆಟ ಹೆಂಡ್ತಿ, ಮಾವನ ಮೇಲೆ ಮಚ್ಚು ಬೀಸಲು ಮುಂದಾದ





