ಬೆಂಗಳೂರಲ್ಲಿ ವರದಕ್ಷಿಣೆಗಾಗಿ ಪತ್ನಿಗೆ ‘PSI’ ಕಿರುಕುಳ – ಮಾವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಪೊಲೀಸ್ ಅಧಿಕಾರಿ!

ಪೊಲೀಸರು ಎಂದ್ರೆ ಕಾನೂನನ್ನು ರಕ್ಷಣೆ ಮಾಡುವವರು, ಜನರನ್ನು ರಕ್ಷಣೆ ಮಾಡುವವರು ಅಂತಾರೆ. ಆದ್ರೆ ಇಲ್ಲೊಬ್ಬ ಪೊಲೀಸಪ್ಪ ರೌಡಿ ರೀತಿ ವರ್ತಿಸ್ತಾ ಇದ್ದು, ಸ್ವಂತ ಹೆಂಡ್ತಿ ಹಾಗೂ ಮಾವನ ಮೇಲೆಯೇ ಮಚ್ಚು ಬೀಸಲು ಮುಂದಾಗಿದ್ನಂತೆ. ಸಾಲದಕ್ಕೆ ಮುದ್ದಾದ ಹೆಂಡ್ತಿ ಹಾಗೂ ಮಗು ಇದ್ರು ಕೂಡ ಬೇರೆ ಹುಡುಗಿಯರ ಶೋಕಿ ಕೂಡ ಇದ್ದು, ಮನೆಗೆ ಹುಡುಗಿಯರನ್ನು ಕರೆತಂದು ಪೊಲೀ ಆಟ ಆಡ್ತಾ ಇದ್ನಂತೆ. ಇಷ್ಟಲ್ಲದೇ ಹೆಂಡ್ತಿಯನ್ನು ಕೊಲೆ ಮಾಡಲು ಮುಂದಾಗಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪೊಲೀಸಪ್ಪನ ಕರ್ಮಕಾಂಡವನ್ನು ಸ್ವತಃ ಪಿಎಸ್ಐ ಹೆಂಡ್ತಿಯೇ ಬಯಲಿಗೆಳೆದಿದ್ದಾಳೆ.

ಬೆಂಗಳೂರಲ್ಲಿ ವರದಕ್ಷಿಣೆಗಾಗಿ ಪತ್ನಿಗೆ ‘PSI’ ಕಿರುಕುಳ
ಹೀಗೆ ಫೋಟೋದಲ್ಲಿ ಕಾಣಿಸ್ತಾ ಇರೋ PSI ಹೆಸರು ಭೈರಪ್ಪ ಅಂತಾ, ಸರ್ಕಾರಿ ಕೆಲಸ ಇದ್ರು ಕೂಡ ಭೈರಪ್ಪ ವರದಕ್ಷಿಣೆ ಆಸೆಗೆ ಬಿದ್ದಿದ್ನಂತೆ. ತವರು ಮನೆಯಿಂದ 50 ಲಕ್ಷ ವರದಕ್ಷಿಣೆ ಹಣ ತರುವಂತೆ ದಿನಾ ಹೆಂಡ್ತಿಗೆ ಟಾರ್ಚರ್ ಕೊಡ್ತಾ ಇದ್ನಂತೆ. ವರದಕ್ಷಿಣೆ ವಿಚಾರಕ್ಕೆ ನಿತ್ಯ ಪಿಎಸ್ಐ ಭೈರಪ್ಪ ತನ್ನ ಹೆಂಡ್ತಿಗೆ ಕಿರುಕುಳ ಕೊಡ್ತಾ ಇದ್ದು, ಮನೆ ಬಿಟ್ಟು ಹೋಗುವಂತೆ ಹೇಳ್ತಾ ಇದ್ನಂತೆ. ಮಗಳು ಎಲ್ಲಿಲ್ಲದ ಕಷ್ಟ ಅನುಭವಿಸ್ತಾ ಇದ್ದು, ಮಗಳ ಕಷ್ಟ ಕೇಳಲು ಮನೆಗೆ ಬಂದ ಮಾವ ಹಾಗೂ ಹೆಂಡ್ತಿ ಮೇಲೆ ಪಿಎಸ್ಐ ಭೈರಪ್ಪ ಮಚ್ಚು ಬೀಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ದೇ ಮನೆಯಲ್ಲಿದ್ದ ಪತ್ನಿಯ ಬಟ್ಟೆಯನ್ನು ಪೋರ್ಟರ್ ಮಾಡಿ ಕಳುಹಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನು ಓದಿ : 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ – PSI ಬಂಧನ!

ಬೇರೆ ಹುಡುಗಿಯರ ಶೋಕಿ
ಇನ್ನು ಪಿಎಸ್ಐ ಭೈರಪ್ಪ ಹೆಂಡ್ತಿಗೆ ವರಕ್ಷಿಣೆ ವಿಚಾರವಾಗಿ ಟಾರ್ಚರ್ ಕೊಡ್ತಾ ಇರೋದು ಒಂದ್ಕಡೆ ಆದ್ರೆ, ಮನೆಯಲ್ಲಿ ಹೆಂಡ್ತಿ ಹಾಗೂ ಮುದ್ದಾದ ಮಗು ಇದ್ರು ಕೂಡ, ಬೇರೆ ಹುಡುಗಿಯರ ಶೋಕಿಯೂ ಕೂಡ ಇತ್ತಂತೆ. ಬೇರೆ ಯುವತಿಯರನ್ನು ಮನೆಗೆ ಕರೆದುಕೊಂಡು ಬಂದು ಪೊಲೀಸಪ್ಪ ಪೊಲೀ ಆಟ ಆಡ್ತಾ ಇದ್ನಂತೆ. ಯುವತಿಯರ ಜೊತೆ ಪಿಎಸ್ಐ ಭೈರಪ್ಪ ಮೆಸೇಜ್ ಮಾಡಿರೋದನ್ನ ಹೆಂಡ್ತಿಯೇ ಬಯಲು ಮಾಡಿದ್ದಾಳೆ.

PSI ಭರಪ್ಪ ಅರೆಸ್ಟ್!
ಹೀಗಾಗಿ ತನಗೆ ನ್ಯಾಯ ಬೇಕು ಎಂದು ಪಿಎಸ್ಐ ಪತ್ನಿ ನಗರ ಪೊಲೀಸ್ ಆಯುಕ್ತ ಮತ್ತು ಡಿಜಿಗೆ ದೂರು ನೀಡಲು ಪತ್ನಿ ಮುಂದಾಗಿದ್ದಾರೆ. ಡಿಜಿಗೆ ದೂರು ನೀಡಿದ ಬೆನ್ನಲ್ಲೇ ಪಿಎಸ್ಐ ಭೈರಪ್ಪ ಮೇಲೆ ಕೆಂಗೇರಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದು, ಪಿಎಸ್ಐನನ್ನು ಬಂಧಿಸಿದ್ದಾರೆ.
ಇದನ್ನು ನೋಡಿ : ವಸತಿ ಶಾಲೆಯಿಂದ ನಿವಾಸಿಗಳಿಗೆ ಸಂಕಷ್ಟ..! – ದಯಾಮರಣ ಕೊಟ್ಟು ಬಿಡಿ ಎಂದ ನಿವಾಸಿಗಳು




