Zameer Ahmed Khan ಗೆ ಬಿಗ್ ರಿಲೀಫ್! ಪ್ರಾಸಿಕ್ಯೂಷನ್ ತಿರಸ್ಕರಿಸಿದ ರಾಜ್ಯಪಾಲರು! ಏನಿದು ಪ್ರಕರಣ?

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅನುಮತಿ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
ಜಮೀರ್ ಖಾನ್ಗೆ ಬಿಗ್ ರಿಲೀಫ್!
Zameer Ahmed Khan ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಸಾವಿರಾರು ಪುಟಗಳ ದಾಖಲೆಗಳೊಂದಿಗೆ ಸಲ್ಲಿಸಲಾಗಿದ್ದ ಈ ಮನವಿಯಲ್ಲಿ, ಜಮೀರ್ ಅವರು ತಮ್ಮ ಆದಾಯಕ್ಕೆ ಹೋಲಿಸಿದರೆ ಸುಮಾರು ₹25 ಕೋಟಿ ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಕುರಿತು ಉಲ್ಲೇಖಿಸಲಾಗಿತ್ತು.
ಆದರೆ, ರಾಜ್ಯಪಾಲರು ಈ ಪ್ರಾಸಿಕ್ಯೂಷನ್ ಮನವಿಯನ್ನು ತಿರಸ್ಕರಿಸಿ, ಜಮೀರ್ ಅಹಮದ್ ಅವರಿಗೆ ದೊಡ್ಡ ನಿರಾಳತೆ ನೀಡಿದ್ದಾರೆ.
ಇದನ್ನು ಓದಿ : ಅಲ್ಪಸಂಖ್ಯಾತರಿಗೆ ಟಿಕೆಟ್ ಫಿಕ್ಸ್ – Zameer Ahmed Khan ಸ್ಪಷ್ಟನೆ..!

ಏನಿದು ಪ್ರಕರಣ?
2018ರಲ್ಲಿ ನಡೆದ ಐಎಂಎ (I Monetary Advisory) ವಂಚನೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು. ಈ ವೇಳೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಸಂಬಂಧ ಇಡಿ ಶಿಫಾರಸಿನ ಮೇರೆಗೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿತ್ತು. ಬಳಿಕ ಎಸಿಬಿ ರದ್ದಾದ ನಂತರ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸಲಾಗಿತ್ತು.

2005ರಿಂದ 2025ರವರೆಗೆ ಆಸ್ತಿ ಪರಿಶೀಲನೆ
ಲೋಕಾಯುಕ್ತ ಪೊಲೀಸರು ಜಮೀರ್ ಅಹಮದ್ ಖಾನ್ ಅವರ ಸುಮಾರು ಎರಡು ದಶಕಗಳ ಆಸ್ತಿ ವಿವರಗಳನ್ನು ಪರಿಶೀಲಿಸಿದ್ದರು. 2005ರಿಂದ 2025ರವರೆಗಿನ ಅವಧಿಯಲ್ಲಿ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ ಸಮಯದ ಆದಾಯ ಮತ್ತು ಆಸ್ತಿ ವಿವರಗಳನ್ನು ತನಿಖೆ ಮಾಡಲಾಗಿತ್ತು.
ಜಮೀರ್ ಅಹಮದ್ ಅವರು 2005ರಲ್ಲಿ ಚಾಮರಾಜಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
ನಂತರ ಐದು ಬಾರಿ ಶಾಸಕರಾಗಿ ಹಾಗೂ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಾಸಿಕ್ಯೂಷನ್ ತಿರಸ್ಕರಿಸಿದ ರಾಜ್ಯಪಾಲರು!
ಲೋಕಾಯುಕ್ತ ತನಿಖೆಯಲ್ಲಿ ಅಧಿಕಾರ ದುರ್ಬಳಕೆಯಿಂದ ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಲಾಗಿತ್ತು.
ಆದರೆ ಇದೀಗ ರಾಜ್ಯಪಾಲರ ನಿರ್ಧಾರದಿಂದ ಪ್ರಕರಣದಲ್ಲಿ ಜಮೀರ್ ಅಹಮದ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಇದನ್ನು ನೋಡಿ : ಕುವೆಂಪು ಅವರ ನಾಡಗೀತೆಯಲ್ಲಿ ಬದಲಾವಣೆ ಬೌದ್ಧ ಧರ್ಮದ ಹೆಸರು ಸೇರಿಸಲು ಪ್ರಸ್ತಾಪ




