CM ಆದ ತಂದೆ ಡಿ.ಕೆ ಶಿವಕುಮಾರ್ – ಭಾವನಾತ್ಮಕ ಪೋಸ್ಟ್ ಮಾಡಿದ ಐಶ್ಞರ್ಯ ಹೆಗ್ಡೆ

ಡಿ.ಕೆ ಶಿವಕುಮಾರ್ ಅವರು ಕಳೆದ 40 ವರ್ಷದ ರಾಜಕೀಯ ಮಾಡಿಕೊಂಡು ಬರ್ತಾ ಇದ್ದು, CM ಆಗಬೇಕು ಅನ್ನೋದು ಡಿಕೆ ಹಾಗೂ ಅವರ ಕುಟುಂಬಸ್ಥರ ಬಹುದಿನಗಳ ಕನಸಾಗಿದೆ.. ಡಿ.ಕೆ ಶಿವಕುಮಾರ್ ಅವರ ಕನಸು ಕೊನೆಗೂ ನನಸಾಗಿದ್ದು, ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಡಿಕೆ ಅವರು ರಾಜ್ಯದ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಇನ್ನು ಡಿಕೆಶಿ ನಿಯೋಜಿತ ಸಿಎಂ ಆಗ್ತಿದ್ದಂತೆ ಮಗಳು ಐಶ್ಚರ್ಯ ಹೆಗ್ಡೆ ಫುಲ್ ಖುಷಿಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

CM ಆದ ಅಪ್ಪನ ಬಗ್ಗೆ ಕೆಲ ಸಾಲುಗಳ ಮೂಲಕ ಅಭಿನಂದನೆ
ಸಿಎಂ ಆದ ಡಿಕೆಶಿಗೆ ಶುಭಾಶಯಗಳು ಅಪ್ಪ ಎಂದು ತಂದೆ ಜೊತೆಗಿನ ವಿಡಿಯೋ ಹಾಗೂ ಪೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಐಶ್ಚರ್ಯ ಹೆಗ್ಡೆ ಶೇರ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇವತ್ತು ಜನರು ಬಂಡೆ ಅಂತಾ ಕರೆಯಬಹುದು.
ಆದ್ರೆ ಆ ಬಂಡೆ ಫಾರ್ಮ್ ಹಾಗೋದಕ್ಕೆ ಎಷ್ಟು ದಿನ ತಗೊಂಡಿದೆ ಅನ್ನೋದನ್ನ ನಾವು ಚಿಕ್ಕವಯಸ್ಸಿಂದ ನೋಡಿದ್ದೇವೆ.
ಇನ್ನು ಆ ಬಂಡೆ ಏನ್ ಮಾಡುತ್ತೋ, ಏನ್ ಆಗುತ್ತೆ ಅಂತಾ ಜನ ಎಷ್ಟು ಕ್ಯೂರಿಯಸ್ ಆಗಿದ್ದಾರೋ ಅಷ್ಟೇ ಕ್ಯೂರಿಯಸ್ ಫ್ಯಾಮಿಲಿಗೆ ಇದೆ ಎಂದು ಹೇಳುತ್ತಾ.. ಡಿಕೆ ಸದಾ ಹೇಳುವ ಮಾತನ್ನು ಐಶ್ವರ್ಯ ಹೆಗ್ದೇ ಈ ಪೋಸ್ಟ್ನಲ್ಲಿ ಮತ್ತೆ ತಿಳಿಸಿದ್ದಾರೆ.
ಇದನ್ನು ಓದಿ : ಡಿ.ಕೆ ಶಿವಕುಮಾರ್ಗೆ ಪಟ್ಟಾಭಿಷೇಕ ಯಾವಾಗ ಗೊತ್ತಾ?

ಡಿಕೆಗೆ ಸಿದ್ದರಾಮಯ್ಯ ಸೇರಿ ಹಲವರಿಂದ ಅಭಿನಂದನೆ
ಇತ್ತ ಡಿಕೆ ಸಿಎಂ ಅಂತಾ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಿಎಂ ಸೇರಿ ಕೆಲ ಶಾಸಕರು ಡಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಮಂದಿ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಡಿ.ಕೆ ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇತ್ತ ಡಿಕೆ ಸಿಎಂ ಆಗ್ತಿದ್ದಂತೆ ರಾಮನಗರದ, ಕನಕಪುರ ಭಾಗದ ಜನರಲ್ಲಿ ಸಂತಸ ಮನೆ ಮಾಡಿದ್ದು, ಸಿಹಿ ಸಂಚಿ, ಪಟಾಕಿ ಸಿಡಿಸಿ ಸಂಭ್ರಮಿಸ್ತಾ ಇದ್ದಾರೆ.
ಇದನ್ನು ನೋಡಿ : TMC ಸಂಸದ, MAMATA BANERJEE -ಅಳಿಯನಿಗೆ ಮೊಟ್ಟೆಯಿಂದ ಹೊಡೆದಿದ್ದು ಯಾರು ಗೊತ್ತಾ?





