ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ವಿಚಾರಕ್ಕೂ Murder ಮಾಡುವ ಚಾಳಿ ಹೆಚ್ಚಾಗುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ದಿನೇ ದಿನೇ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಯುವಜನತೆ ಸಣ್ಣಪುಟ್ಟ ಕಾರಣಗಳಿಗೆ ಕೊಲೆ ಮಾಡಲು ಮುಂದಾಗುತ್ತಿದ್ದಾರೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅನ್ನೋ ಕಾರಣಕ್ಕೆ ಯುವಕನೋರ್ವನನ್ನು ಕೊಲೆ (Murder) ಮಾಡಲು ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರದ ಅಗ್ರಹಾರದಲ್ಲಿ ಘಟನೆ ನಡೆದಿದ್ದು, ಹಲ್ಲೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಅಕ್ರಮ ಸಂಬಂಧದ ಹಿನ್ನಲೆ ಯುವಕನ ಕೊಲೆಗೆ ಯತ್ನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ದೀಪ ಎಂಬ ಮಹಿಳೆ ಜೊತೆಯಲ್ಲಿ ಕಾರ್ತಿಕ್ ಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ವಿಚಾರವಾಗಿ ಕಳೆದ ತಿಂಗಳು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತಂತೆ. ಆಗ ಎರಡು ಕುಟುಂಬದವರು ಕೂತು ರಾಜಿ ಸಂದಾನ ಮಾಡಿದ್ದರಂತೆ.
ಇದನ್ನು ಓದಿ : ಪಾರ್ಟಿ ಮಾಡುತ್ತಿದ್ದವರ ಬಳಿ ಹಣ ಕೇಳಿದ ಪೊಲೀಸರು- ಹೆದರಿ ಬಾಲ್ಕನಿಯಿಂದ ಜಿಗಿದು ಯುವತಿ ಗಂಭೀರ
ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಕೆಲವರು ಏಕಾಏಕಿ ಕಾರ್ತಿಕ್ ಮೇಲೆ ಮಾರಾಕಾಸ್ತ್ರಗಳಿಂದ ನಡುರಸ್ತೆಯಲ್ಲಿಯೇ ತಲೆ, ಮುಖ,ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಇರಿದಿದ್ದಾರೆ. ಇತ್ತ ತನ್ನ ಮಗನನ್ನು ಬಿಡಿಸಲು ಹೋದ ತಂದೆ ಮಧುಸೂದನ್ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರಂತೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಯುವಕ ಪಾರು
ಇನ್ನು ಐದಕ್ಕೂ ಹೆಚ್ಚು ಜನರು ಕಾರ್ತಿಕ್ ಮೇಲೆ ಹಲ್ಲೆ ಮಾಡುತಿದ್ದನ್ನು ಕಂಡ ಗ್ರಾಮದ ಜನರು ಓಡಿ ಬಂದು ಹರಸಾಹಸ ಮಾಡಿ ಕಾರ್ತಿಕ್ ನನ್ನು ರಕ್ಷಣೆ ಮಾಡಿದ್ದಾರೆ. ಆದಾದ ಬಳಿಕೆ ರಕ್ತದ ಮಡುವಿನಲ್ಲಿದ್ದ ಕಾರ್ತಿಕ್ ನನ್ನು ಕೂಡಲೇ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಕಾರ್ತಿಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಸ್ಥಳಕ್ಕೆ ASP ನಾಗರಾಜ್ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕೊಲೆಗೆ ಯತ್ನಿಸಿದ್ದ ವ್ಯಕ್ತಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಪತ್ನಿಯ ಯಡವಟ್ಟು, ಜಡೇಜಾಗೆ ಸಂಕಷ್ಟ..? ಫ್ಯಾನ್ಸ್ ಆಕ್ರೋಶ




