Davanagere ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ವಿರುದ್ಧ ಕಠಿಣ ಪೈಪೋಟಿಯಲ್ಲಿ ಜಯ.

Davanagere ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮಹತ್ವದ ಜಯ ಸಾಧಿಸಿದೆ. ಪಕ್ಷದ ಪ್ರತಿಷ್ಠೆಯ ಕಣವಾಗಿದ್ದ ಈ ಕ್ಷೇತ್ರದಲ್ಲಿ ಕೊನೆಗೂ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರು ವಿಜಯಮಾಲೆ ಧರಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪ್ರಬಲ ಸ್ಪರ್ಧೆ ನೀಡಿದರೂ ಅಂತಿಮವಾಗಿ ಸೋಲನುಭವಿಸಿದರು. ಜಿದ್ದಾಜಿದ್ದಿನ ಹೋರಾಟದ ನಂತರ ಕಾಂಗ್ರೆಸ್ ಪರ ಫಲಿತಾಂಶ ತಿರುಗಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.
MUST READ : IPL 2026 : ನಿರ್ಣಾಯಕ ಹಂತಕ್ಕೂ ಮುನ್ನ ಮಾಲ್ಡೀವ್ಸ್ಗೆ ಹಾರಿದ RCB ಪಡೆ..!

ದಿವಂಗತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪಚುನಾವಣೆ ನಡೆದಿತ್ತು. ಸಮರ್ಥ್ ಮಲ್ಲಿಕಾರ್ಜುನ್ ಅವರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರರಾಗಿದ್ದು, ಕುಟುಂಬದ ರಾಜಕೀಯ ಪರಂಪರೆಯನ್ನು ಮುಂದುವರಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 2,31,072 ಮತದಾರರಿದ್ದು, 1,58,131 ಮಂದಿ ಮತ ಚಲಾಯಿಸಿದ್ದು, ಶೇಕಡಾ 68.43ರಷ್ಟು ಮತದಾನ ದಾಖಲಾಗಿದೆ. ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದರು. ಅಲ್ಪಸಂಖ್ಯಾತ ಮತದಾರರು ಕೈಕೊಡುತ್ತಾರೆ ಎನ್ನಲಾಗಿದ್ದರೂ, ಅಂತಿಮವಾಗಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
MUST WATCH : KORATAGERE DEVELOPMENTಆಗಿದ್ಯಾ..? PARAM ಕೆಲಸದ ಬಗ್ಗೆ ಜನ ಏನಂದ್ರು?




