Chitradurga | ವಿದ್ಯುತ್ ಸ್ಪರ್ಶಿಸಿ ನವಿಲು ಸಾವು – ನವಿಲು ತಿನ್ನೋಕೆ ಹೋಗಿ ಚಿರತೆಯೂ ಸಾವು

Chitradurga ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ವಿದ್ಯುತ್ ಪರಿವರ್ತಕದ ಬಳಿ ನವಿಲೊಂದು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟಿದೆ.
ಇದನ್ನು ಓದಿ : ಗೊಡಬನಹಾಳ್ ಗ್ರಾಮದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ಚಿರತೆಗೂ ಕರೆಂಟ್ ಶಾಕ್!
ಇನ್ನು ನವಿಲು ಮೃತಪಟ್ಟಿರುವುದನ್ನ ಗಮನಿಸಿದ ಚಿರತೆಯೊಂದು, ನವಿಲನ್ನ ತಿನ್ನಲು ಹೋಗಿ ಚಿರತೆಗೂ ಕೂಡ ಕರೆಂಟ್ ಶಾಕ್ ಹೊಡೆದಿದ್ದು, ಟ್ರಾನ್ಸ್ಫಾರ್ಮರ್ ಮೇಲೆಯೇ ಚಿರತೆಯೂ ಕೂಡ ಮೃತಪಟ್ಟಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ
ಬಳಿಕ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಸದ್ಯ ಈ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಡುಪ್ರಾಣಿಗಳು ಹಾಗೂ ಪಕ್ಷಿಗಳು ವಿದ್ಯುತ್ ಪರಿವರ್ತಕಗಳ ಬಳಿ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನು ನೋಡಿ : ಬರ ವೀಕ್ಷಣೆಗೆ ಬಂದ DCMಗೆ SIRAದಲ್ಲಿ ಗ್ರಾಮಸ್ಥರಿಂದ ದೂರುಗಳ ಸುರಿಮಳೆ !

