Chitradurga ದಲ್ಲಿ ಮೇ 9ರಂದು ಯಡಿಯೂರಪ್ಪ ಅಭಿಮಾನೋತ್ಸವ ನಡೆಯಲಿದ್ದು, 10 ಸಾವಿರ ಬಸ್ ಬುಕ್ಕಿಂಗ್ ಹಿನ್ನೆಲೆ ಸಾರ್ವಜನಿಕ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.

Chitradurga : ಮಾಜಿ ಮುಖ್ಯಮಂತ್ರಿ B. S. Yediyurappa ಅವರ 50 ವರ್ಷದ ರಾಜಕೀಯ ಜೀವನ ಪೂರ್ಣಗೊಂಡ ಹಿನ್ನೆಲೆ, ಮೇ 9ರಂದು Chitradurgaದಲ್ಲಿ ಭವ್ಯ “ಯಡಿಯೂರಪ್ಪ ಅಭಿಮಾನೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ Amit Shah ಸೇರಿದಂತೆ ಹಲವು ಸ್ವಾಮೀಜಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಮಾದಾರ ಚನ್ನಯ್ಯ ಮಠದ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.
MUST READ : Gold & Silver Rate : ಚಿನ್ನದ ಬೆಲೆ ಏರಿಕೆ – ಬೆಳ್ಳಿಯೂ ದುಬಾರಿ..!

ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತರಲು ಸುಮಾರು 10 ಸಾವಿರ ಬಸ್ಗಳನ್ನು ಬುಕ್ ಮಾಡಲಾಗಿದೆ. ಇದರ ಪರಿಣಾಮವಾಗಿ, ಮೇ 9ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಸಾಮಾನ್ಯ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಆದ್ದರಿಂದ ಸಾರ್ವಜನಿಕರು ಆ ದಿನ ತಮ್ಮ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಒಳಿತು. ಅಗತ್ಯವಿದ್ದಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
MUST WATCH : BENGALURU ಪೊಲೀಸರ ಭರ್ಜರಿ ಕಾರ್ಯಾಚರಣೆ – 9 ಕೋಟಿ ಮೌಲ್ಯದ DRUG SEIZE, ನಾಲ್ವರು ಅಂದರ್ | BENGALURU NEWS |




