Chikkaballapur Death : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರೀತಿ ಮದುವೆಯಾದ ಶಿರೀಶಾ ಎಂಬ ಯುವತಿ ಅತ್ತೆ-ಮಾವನ ಹಿಂಸೆ ತಾಳಲಾರದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

Chikkaballapur Death : ಅತ್ತೆ-ಮಾವನ ಹಿಂಸೆ ತಾಳಲಾರದೆ ಶಿರೀಶಾ ಆತ್ಮಹತ್ಯೆ
ಪ್ರೀತಿ ಮಾಡಿದ ಎಲ್ಲರ ಪ್ರೀತಿಯೂ ಗೆಲ್ಲೋದಿಲ್ಲ. ಕೆಲವೊಮ್ಮೆ ಗೆದ್ದ ಪ್ರೀತಿಯೇ ಜೀವವನ್ನೂ ಕಳೆದುಕೊಳ್ಳುವಂತಾಗುತ್ತದೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದ ಈ ಘಟನೆಯು ಇದೇ ಮಾತಿಗೆ ಸಾಕ್ಷಿಯಾಗಿದೆ.
ಐದು ವರ್ಷದ ಪ್ರೇಮ, ದೇವಸ್ಥಾನದಲ್ಲಿ ಮದುವೆ
ಶಿರೀಶಾ ಮತ್ತು ಶ್ರೀನಾಥ್ — ಇಬ್ಬರೂ ಸುಮಾರು ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೂ, ಕಳೆದ ಒಂದು ವರ್ಷದ ಹಿಂದೆ ದೇವಸ್ಥಾನದಲ್ಲಿ ಮದುವೆ ಆಗಿದ್ದರು.
ಆದರೆ ಗಂಡನ ತಂದೆ-ತಾಯಿಗೆ ಈ ಮದುವೆ ಇಷ್ಟವಾಗಿರಲಿಲ್ಲ. ತಮ್ಮ ಸೋದರಮಾವನ ಮಗಳನ್ನು ಮದುವೆ ಮಾಡಿಸಬೇಕೆಂದು ಬಯಸಿದ ಪೋಷಕರು, ಸೊಸೆ ಮೇಲೆ ಕೋಪಗೊಂಡು ಅವಳಿಗೆ ದಿನವೂ ಕಿರುಕುಳ ನೀಡುತ್ತಿದ್ದರು.

MUST READ : Chikkaballapur News : ಚಿಕ್ಕಬಳ್ಳಾಪುರದಲ್ಲಿ ತಂದೆಯ ಸಾವಿನ ನೋವಲ್ಲೇ ಮಗಳ ಆತ್ಮಹತ್ಯೆ
ವರದಕ್ಷಿಣೆಗಾಗಿ ಹಿಂಸೆ
ಮದುವೆಯಾದ ನಂತರ ಶಿರೀಶಾಳಿಗೆ ಶಾಂತಿ ಇರಲಿಲ್ಲ. ಅತ್ತೆ-ಮಾವನಿಂದ ನಿತ್ಯ ಕಿರುಕುಳ, ಹಣದ ಬೇಡಿಕೆಗಳು, ಮತ್ತು ಮಾನಸಿಕ ಹಿಂಸೆ ಮುಂದುವರಿದವು. ಒಂದು ವೇಳೆ ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ₹30,000 ಪರಿಹಾರವಾಗಿ ನೀಡಿದ್ದರೂ, ಅದೂ ಸಾಲದೆಂದು ಮತ್ತಷ್ಟು ವರದಕ್ಷಿಣೆ ಬೇಡಿಕೆ ಮುಂದುವರಿಯಿತು.
ಮನನೊಂದು ಕೀಟನಾಶಕ ಸೇವನೆ
ನಿತ್ಯ ಹಿಂಸೆ ಮತ್ತು ಮಾನಸಿಕ ಒತ್ತಡದಿಂದ ಬೇಸತ್ತ ಶಿರೀಶಾ ಕೊನೆಗೆ ಸಾಯುವ ನಿರ್ಧಾರ ಕೈಗೊಂಡರು. ಆತ್ಮಹತ್ಯೆಗೆ ಮೊದಲು ಅವರು ತಮ್ಮ ಅಣ್ಣನಿಗೆ ಕರೆ ಮಾಡಿ “ಇನ್ನು ಬದುಕೋದಿಲ್ಲ” ಎಂದು ಹೇಳಿದ್ದರಂತೆ.
ಅದಾದ ಬಳಿಕ ಗಂಡನ ಮನೆಯ ತೋಟದಲ್ಲಿ ಕೀಟನಾಶಕ ಮಾತ್ರೆಗಳನ್ನು ನುಂಗಿ ಜೀವ ಬಿಟ್ಟಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆ
ಈ ಘಟನೆಯ ನಂತರ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜನತೆ ಆಕ್ರೋಶಗೊಂಡರು. ಶಿರೀಶಾಳ ಮೃತದೇಹವನ್ನು ನಡುರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು. ಕುಟುಂಬಸ್ಥರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.

MUST WATCH : SIRA BCM HOSTEL INCIDENT |ವಿದ್ಯಾರ್ಥಿ ನಿಗೂಢ ಸಾವು..?
ಕುಟುಂಬದ ಕಣ್ಣೀರು ಮತ್ತು ನೋವು
ಶಿರೀಶಾಳ ತಾಯಿ-ತಂದೆ, ಅಕ್ಕ-ಅಣ್ಣಂದಿರು ಅಳುತ್ತಾ “ನಮ್ಮ ಮಗಳ ಹತ್ಯೆಗೆ ನ್ಯಾಯ ಬೇಕು” ಎಂದು ಕಣ್ಣೀರಿನ ಮನವಿ ಮಾಡಿದ್ದಾರೆ.
ಪ್ರಭು (ಶಿರೀಶಾಳ ಅಣ್ಣ)
“ನಮ್ಮ ತಂಗಿಯ ಜೀವ ಹೀಗೆ ಹೋದದ್ದು ಅತ್ತೆ-ಮಾವನ ಹಿಂಸೆಯಿಂದಲೇ. ನಮಗೆ ನ್ಯಾಯ ದೊರೆಯಬೇಕು.”
ಬದುಕಿನ ಆಸೆ- ಬಾಳಿಗೆ ಅಂತ್ಯ
ಬಾಳನ್ನು ಪ್ರೀತಿಯಿಂದ ಕಟ್ಟಿಕೊಳ್ಳಬೇಕೆಂದು ಗಂಡನ ಮನೆ ಸೇರಿದ್ದ ಶಿರೀಶಾ ಕೊನೆಗೆ ಹಿಂಸೆಯಿಂದ ಬೇಸತ್ತು ಜೀವವನ್ನೇ ಬಿಟ್ಟಿದ್ದಾಳೆ.
ಪ್ರೇಮ ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ಈ ರೀತಿಯ ಘಟನೆಗಳು ಸಮಾಜದ ನಾಚಿಕೆಯಾಗಿದ್ದು, ಮಹಿಳೆಯ ಸುರಕ್ಷತೆಯ ಪ್ರಶ್ನೆ ಮತ್ತೆ ಎದ್ದಿದೆ.





Shocking