Chikkaballapur News : ಚಿಕ್ಕಬಳ್ಳಾಪುರದ ಗೌರಿಬಿದನೂರಿನ 22 ವರ್ಷದ ಸ್ವರ್ಣ, ತಂದೆಯ ಸಾವಿನ ದುಃಖ ತಾಳಲಾರದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂರು ತಿಂಗಳ ಹಿಂದಷ್ಟೇ ತಂದೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದರು.

Chikkaballapur News : ಮೂರು ತಿಂಗಳ ಹಿಂದಷ್ಟೇ ತಂದೆ ಕಳೆದುಕೊಂಡ ಮಗಳು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ.
ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ 22 ವರ್ಷದ ಸ್ವರ್ಣ, ತನ್ನ ತಂದೆಯ ಸಾವಿನ ನೋವಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ವರ್ಣ ಮೂರು ತಿಂಗಳ ಹಿಂದೆ ತಂದೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದಳು.
ಬದುಕಿನ ಧೈರ್ಯ ಕಳೆದುಕೊಂಡು ಕಾಲೇಜಿನ ಹಾಸ್ಟೆಲ್ನಲ್ಲಿಯೇ ಇಲಿ ಪಾಷಾಣ ಸೇವಿಸಿದ್ದಳು.
Chikkaballapur :ಇಲಿ ಪಾಷಾಣ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಘಟನೆ ನಡೆದ ತಕ್ಷಣ ಸ್ವರ್ಣಳ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.11 ರಂದು ತಡರಾತ್ರಿ ಸ್ವರ್ಣ ಮೃತಪಟ್ಟಿದ್ದಾಳೆ.ಸ್ವರ್ಣ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಳು.
ತಂದೆಯ ಸಾವಿನಿಂದ ಬಾಧಿತರಾಗಿದ್ದ ಆಕೆ ಮನೆಯವರಿಗೂ ತನ್ನ ದುಃಖವನ್ನು ಹೇಳಿಕೊಳ್ಳದೆ, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
MUST READ : Bigboss ಮೇಲೆ ಕಣ್ಣು ಬಿದ್ದಿತ್ತು ಎಂದ ಸುದೀಪ್
ಗಂಡ, ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ
ಒಂದು ಕಡೆ ಗಂಡನ ಸಾವಿನ ನೋವು ತಾಳುತ್ತಿದ್ದ ತಾಯಿ, ಈಗ ಮಗಳನ್ನೂ ಕಳೆದುಕೊಂಡಿದ್ದಾರೆ.ಮಗನ ಮುಖ ನೋಡಿಕೊಂಡು ಬದುಕುತ್ತಿದ್ದ ತಾಯಿಗೆ ಇದೀಗ ದಿಕ್ಕೇ ತೋಚದಂತಾಗಿದೆ.ಸ್ವರ್ಣಳ ಅಕ್ಕನ ಸಾವಿನಿಂದ ತಮ್ಮ ಸಹ ಮಾನಸಿಕವಾಗಿ ಕುಗ್ಗಿದ್ದು, ಕುಟುಂಬವೇ ದುಃಖದ ನೆರಳಿನಲ್ಲಿ ಮುಳುಗಿದೆ.
Chikkaballapur: ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ಈ ಪ್ರಕರಣದ ಬಗ್ಗೆ ಬೆಂಗಳೂರು ಹೈಗ್ರೌಂಡ್ ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಸ್ವರ್ಣಳ ತಾಯಿಯಿಂದ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
MUST WATCH : SIRA BCM HOSTEL INCIDENT |ವಿದ್ಯಾರ್ಥಿ ನಿಗೂಢ ಸಾವು..?




