BBK 12 : ಬಿಗ್ಬಾಸ್ ಕನ್ನಡ ಸೀಸನ್ 12 ತಾತ್ಕಾಲಿಕವಾಗಿ ನಿಂತಿದ್ದರೂ, ಡಿಕೆ ಶಿವಕುಮಾರ್ ಮತ್ತು ನಲಪಾಡ್ ಅವರ ಸಹಾಯದಿಂದ ಕೇವಲ 24 ಗಂಟೆಗಳಲ್ಲಿ ಶೋ ಪುನಃ ಆರಂಭವಾಯಿತು. ಸುದೀಪ್ ಧನ್ಯವಾದ ಹೇಳಿ, ಬಿಗ್ಬಾಸ್ ಮೇಲೆ ಕೆಲವರ ಕಣ್ಣು ಬಿದ್ದಿದೆ ಎಂದರು.

BBK 12 : ಬಿಗ್ಬಾಸ್ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?
ಬಿಗ್ಬಾಸ್ ಕನ್ನಡ ಸೀಸನ್ 12 ಶೋಗೆ ಇತ್ತೀಚೆಗೆ ಸಣ್ಣ ಸಮಸ್ಯೆ ಎದುರಾಯಿತು.ಮನೆಯ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರೆಸಾರ್ಟ್ಗೆ ಸ್ಥಳಾಂತರಿಸಲಾಗಿತ್ತು. ಆದರೆ ಕೇವಲ 24 ಗಂಟೆಗಳಲ್ಲಿ ಸುದೀಪ್ ಹಾಗೂ ಕೆಲವರ ಪ್ರಯತ್ನದಿಂದ ಶೋ ಪುನಃ ಆರಂಭವಾಯಿತು.ಈ ಘಟನೆಯ ಬಳಿಕ, ವಾರದ ಪಂಚಾಯಿತಿಯಲ್ಲಿ ಸುದೀಪ್ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
BigBoss ಕನ್ನಡಿಗರ ಹೆಮ್ಮೆಯ ಶೋ
ಸುದೀಪ್ ಹೇಳಿದರು —
“ಬಿಗ್ಬಾಸ್ ಕನ್ನಡಿಗರ ಹೆಮ್ಮೆಯ ಶೋ. 12 ಸೀಸನ್ಗಳಿಂದ ಕನ್ನಡಿಗರು ಇದನ್ನು ಬೆಳೆಸಿದ್ದಾರೆ. ಇದನ್ನು ಹಾಳು ಮಾಡುವುದು ಸುಲಭವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ಬಿಗ್ಬಾಸ್ ಮುನ್ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಎದುರಾದ ಸಮಸ್ಯೆಯ ಸಮಯದಲ್ಲಿ ಬಿಗ್ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದಗಳು.ಕೆಲವರು ಬಿಗ್ಬಾಸ್ ಎಂಬ ಅಡ್ರೆಸ್ನ್ನು ಮುಚ್ಚಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಿಲ್ಲ. ಈ ಶೋ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ, ಹಲವರ ಬದುಕನ್ನೇ ಬದಲಾಯಿಸಿದೆ. ಆದ್ದರಿಂದ ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಬಹುದು,” ಎಂದರು.

MUST READ : BBK 12 : ಸುಧಿ ಅಸುರಾಧಿಪತಿ ಅಲ್ಲ ಜೋಕರ್ BBK ಮನೆಯಲ್ಲಿ Kiccha ಸಹ ಅಸಮಾಧಾನ
BigBoss –ಡಿಕೆ ಶಿವಕುಮಾರ್, ನಲಪಾಡ್ ಹಾಗೂ ಅಧಿಕಾರಿಗಳಿಗೆ ಧನ್ಯವಾದ
ಸಮಸ್ಯೆ ಎದುರಾದಾಗ ಸುದೀಪ್ ಅವರು ಧನ್ಯವಾದ ಹೇಳಿದವರು —
“ನಮ್ಮ ಡಿಕೆ ಸಾಹೇಬರು (ಡಿಕೆ ಶಿವಕುಮಾರ್) ಹಾಗೂ ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು.
ಜೊತೆಗೆ ಬಿಗ್ಬಾಸ್ ತಪ್ಪೇನಿಲ್ಲ ಎಂದು ಸ್ಪಷ್ಟಪಡಿಸಿದ ಮತ್ತು ಶೋ ಪುನಃ ಆರಂಭವಾಗಲು ಸಹಾಯ ಮಾಡಿದ ಆಡಳಿತ ವಿಭಾಗದ ಅಧಿಕಾರಿಗಳಿಗೂ ಧನ್ಯವಾದಗಳು.”
BigBoss – ಜಾಲಿವುಡ್ ಸ್ಟುಡಿಯೋ ವಿವಾದ
ಬಿಗ್ಬಾಸ್ ಸೆಟ್ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಂದ ನೋಟಿಸ್ ಬಂದಿತ್ತು.
ಆದರೆ ನೋಟಿಸ್ಗೆ ಸ್ಪಂದನೆ ಸಿಗದೆ ಇರುವ ಕಾರಣಕ್ಕೆ ಜಿಲ್ಲಾಡಳಿತ ಸ್ಟುಡಿಯೋಗೆ ಬೀಗ ಜಡಿತು.
ಇದರ ಪರಿಣಾಮವಾಗಿ ಬಿಗ್ಬಾಸ್ ಮನೆಯಲ್ಲಿ ಇದ್ದ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ಹೊರಗೆ ಕಳಿಸಲಾಯಿತು.
ನಂತರ ಸುದೀಪ್ ಅವರು ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿ, ಬಿಗ್ಬಾಸ್ ಶೋಗೆ ಪ್ರತ್ಯೇಕ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಅದಾದ ಬಳಿಕ ಶೋ ಕೇವಲ ಒಂದು ದಿನದಲ್ಲೇ ಮತ್ತೆ ಆರಂಭವಾಯಿತು.
BigBoss ಕತ್ತಲಿನಿಂದ ಬೆಳಕಿಗೆ
ಬಿಗ್ಬಾಸ್ ಶೋಗೆ ಬಂದಿದ್ದ ಸಣ್ಣ ತೊಂದರೆ ಕೇವಲ 24 ಗಂಟೆಗಳಲ್ಲಿ ಪರಿಹಾರವಾಯಿತು.
ಸುದೀಪ್ ಅವರ ಮಾತಿನಂತೆ,
“ಬಿಗ್ಬಾಸ್ ಕನ್ನಡಿಗರ ಪ್ರೀತಿಯಿಂದ ಬದುಕಿರುವ ಶೋ. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ.”
MUST READ : BBK 12 : Ashwini Gowda – Rashika Shetty ಮತ್ತು Manjubhasini ಯನ್ನು ಜೈಲಿಗೆ ಕಳಿಸಿದ್ರು – BBK 12 ಹೊಸ Drama
MUST WATCH : SAND MAFIA | ಗಡಿ ತಾಲೂಕಿನಲ್ಲಿ ಮರಳು ದಂಧೆ ಕಣ್ಮುಚ್ಚಿ ಕುಳಿತ್ರಾ ಅಧಿಕಾರಿಗಳು | PAVAGADA SAND MAFIA |




