ಲಖನೌ-ದೆಹಲಿ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ Bomb Threat ಸಂದೇಶ; ವಿಮಾನ ಹಾರಾಟ ಸ್ಥಗಿತ

ಲಖನೌದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾಗಿದ್ದು, ಸುಮಾರು 180 ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತು. ನಂತರ ನಡೆಸಿದ ಪರಿಶೀಲನೆಯಲ್ಲಿ ಇದು ಹುಸಿ ಬೆದರಿಕೆ ಎಂಬುದು ಬೆಳಕಿಗೆ ಬಂದಿದೆ.
ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!
ಇಂದು ಬೆಳಗ್ಗೆ 10 ಗಂಟೆ 45 ನಿಮಿಷಕ್ಕೆ ಲಖನೌದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ Bomb Threat ನ ಮಾಹಿತಿ ದೊರಕುತ್ತಿದ್ದಂತೆ ಭದ್ರತಾ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡರು. ವಿಮಾನವನ್ನು ಟೇಕ್ಆಫ್ಗೆ ಅನುಮತಿಸದೇ ಏಪ್ರನ್ ಪ್ರದೇಶದಲ್ಲೇ ತಡೆಹಿಡಿಯಲಾಯಿತು.
ಇದನ್ನು ಓದಿ : Indigo ವಿಮಾನ ಹಾರಾಟ ರದ್ದು –ಇತರೆ ಏರ್ಲೈನ್ಸ್ಗಳ ಟಿಕೆಟ್ ದರ ಏರಿಕೆ!

ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ತಪಾಸಣೆ
ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭದ್ರತಾ ಸಿಬ್ಬಂದಿ ವಿಮಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ತಪಾಸಣೆ ನಡೆಸಿದರು. ಈ ವೇಳೆ ಯಾವುದೇ ಅಪಾಯ ಸಂಭವಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು.
ಟಿಶ್ಯೂ ಪೇಪರ್ ಮೇಲೆ Bomb Threat ಸಂದೇಶ
ವಿಮಾನದ ಶೌಚಾಲಯದಲ್ಲಿ ಬಾಂಬ್ ಎಂಬ ಪದವಿರುವ ಟಿಶ್ಯೂ ಪೇಪರ್ ಪತ್ತೆಯಾದ ನಂತರ ಭಯ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಇದರಿಂದ ಭದ್ರತಾ ಸಂಸ್ಥೆಗಳು ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಿಸಿದರು. ಕೊನೆಗೆ ಇದೊಂದು ಹುಸಿ ಬೆದರಿಕೆ ಎಂದು ತಿಳಿದುಬಂತು. ಭದ್ರತಾ ತಪಾಸಣೆಯ ಸಮಯದಲ್ಲಿ, ಅಧಿಕಾರಿಗಳಿಗೆ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಇತರ ಹಾನಿಕಾರಕ ವಸ್ತು ಪತ್ತೆಯಾಗಲಿಲ್ಲ.

ಘಟನೆಯಿಂದಾಗಿ ವಿಮಾನದ ಹಾರಾಟದಲ್ಲಿ ವಿಳಂಬ ಉಂಟಾಗಿದ್ದು, ಸಂಪೂರ್ಣ ಭದ್ರತಾ ಪರಿಶೀಲನೆ ಮುಗಿದ ಬಳಿಕವೇ ವಿಮಾನಕ್ಕೆ ಹಾರಾಟದ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ಕರುನಾಡಿನಲ್ಲಿ TAMIL CM ಸಂಚಾರ – ಕೊಲ್ಲೂರಿನತ್ತ VIJAY ಪ್ರಯಾಣ




