ಬಿಟ್ ಕಾಯಿನ್ ಕೇಸ್ನಲ್ಲಿ Nalapad ಗೆ ಬಿಗ್ ಶಾಕ್.

ಬಿಟ್ ಕಾಯಿನ್ ಬಹುಕೋಟಿ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ (Mohammed Nalapad )ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ನಲಪಾಡ್ ಅವರ ಹೆಸರು ಕೂಡ ಸೇರ್ಪಡೆಯಾಗಿದೆ ಎಂದು ತಿಳಿದು ಬಂದಿದೆ.
ಎಸ್ಐಟಿ ಚಾರ್ಜ್ಶೀಟ್ ಸಲ್ಲಿಕೆ
ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ, ಪ್ರಮುಖ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ ಶ್ರೀಕಿ, ರಾಬಿನ್ ಖಂಡೇವಾಲ, ಮೊಹಮ್ಮದ್ ನಲಪಾಡ್ ಸೇರಿ ಇತರ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ನಲಪಾಡ್ ವಿರುದ್ಧದ ಆರೋಪವೇನು?
ಚಾರ್ಜ್ಶೀಟ್ ಪ್ರಕಾರ, ಬಿಟ್ಕಾಯಿನ್ ನಗದೀಕರಣ ಪ್ರಕ್ರಿಯೆಗೆ ಸಂಬಂಧಿಸಿ ಶ್ರೀಕಿ ಅವರು ನಲಪಾಡ್ ಅವರನ್ನು ಸಂಪರ್ಕಿಸಿದ್ದರೆಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ನಲಪಾಡ್ ತಮ್ಮ ಸ್ನೇಹಿತರ ಸಹಾಯದಿಂದ ಬಿಟ್ಕಾಯಿನ್ ಅನ್ನು ನಗದೀಕರಣಗೊಳಿಸಲು ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಅಂಶವನ್ನು ಚಾರ್ಜ್ಶೀಟ್ನಲ್ಲಿಯೂ ದಾಖಲಿಸಲಾಗಿದೆ.
ಕಮಿಷನ್ನಲ್ಲಿ ಪಾಲು ಪಡೆದ ಆರೋಪ
ಮುಂಬೈ ಮೂಲದ ಸ್ನೇಹಿತನ ಮೂಲಕ ಹವಾಲಾ ಮಾರ್ಗದಲ್ಲಿ ಹಣ ನಗದೀಕರಣ ಮಾಡಲಾಗಿದ್ದು, ಈ ವ್ಯವಹಾರದಲ್ಲಿ ದೊರೆತ ಕಮಿಷನ್ನ ಒಂದು ಭಾಗ ನಲಪಾಡ್ ಅವರಿಗೆ ತಲುಪಿರುವುದಾಗಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ಐಟಿ ಹೇಳಿದೆ. ಈ ಆರೋಪಗಳು ಚಾರ್ಜ್ಶೀಟ್ನಲ್ಲಿ ದಾಖಲಾಗಿರುವುದರಿಂದ ನಲಪಾಡ್ ಅವರಿಗೆ ಕಾನೂನು ಸವಾಲುಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಇದನ್ನು ಓದಿ : ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಮೇಲೆ ED ದಾಳಿ!

ಇಡಿ ತನಿಖೆಯೂ ಮುಂದುವರಿಕೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಇಡಿ ಅಧಿಕಾರಿಗಳು ನಲಪಾಡ್, ಶ್ರೀಕಿ ಸೇರಿದಂತೆ ಕೆಲವರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಶ್ರೀಕಿ, ಸುಖೇಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
Nalapad ಗೆ ಮೂರನೇ ನೋಟಿಸ್ ನೀಡಲು ಸಿದ್ಧತೆ
ಈ ಹಿಂದೆ ನಲಪಾಡ್ ಅವರಿಗೆ ಇಡಿ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ವಿವಿಧ ಕಾರಣಗಳನ್ನು ನೀಡಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಇದೀಗ ಮೂರನೇ ಬಾರಿಗೆ ನೋಟಿಸ್ ನೀಡಲು ಇಡಿ ಸಿದ್ಧತೆ ನಡೆಸಿದ್ದು, N. A. Haris ಅವರ ಪುತ್ರರಾಗಿರುವ ನಲಪಾಡ್ಗೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ.

ಇದನ್ನು ನೋಡಿ : HEMAVATHI LINK CANALಗೆ BJP ವಿರೋಧ – ಕೆನಾಲ್ ಕಾಮಗಾರಿ ಶುರು ಆದ್ರೆ ಹೋರಾಟ ಫಿಕ್ಸ್




