BBK S12 : ದೊಡ್ಮನೆಯಲ್ಲಿ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಈ ವಾರ ವೋಟಿಂಗ್ ಲೈನ್ಸ್ ತೆರೆಯದಿದ್ದರೂ, ಸೂಪರ್ ಸಂಡೇಯಲ್ಲಿ ಸುದೀಪ್ ಅವರು ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಡಬಲ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಹಾಕಿದ್ದಾರೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ಯಾಕೆ ಗೊತ್ತಾ? ಮುಂದೆ ಓದಿ.

BBK S12 : ಈ ವಾರ ನಾಮಿನೇಷನ್ನಲ್ಲಿ ಯಾರು ಯಾರು?
ಈ ವಾರ ದೊಡ್ಮನೆ ಮನೆಯಿಂದ ಹೊರ ಹೋಗುವ ಅಪಾಯದಲ್ಲಿದ್ದ ಸ್ಪರ್ಧಿಗಳು:ರಜತ್, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ.
ಆದರೆ, ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲದ ನಡುವೆ ಬಿಡುಗಡೆಯಾದ ಹೊಸ ಪ್ರೋಮೋ ವೀಕ್ಷಕರನ್ನು ಅಚ್ಚರಿಗೊಳಿಸಿದೆ.
ಸೂಪರ್ ಸಂಡೇಯಲ್ಲಿ ಸಖತ್ ಟ್ವಿಸ್ಟ್
Super Sunday with Kiccha Sudeep ಎಪಿಸೋಡ್ನಲ್ಲಿ ಏಳು ಮಂದಿಯಲ್ಲಿ ಕೊನೆಯದಾಗಿ ಉಳಿದವರು ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ.
ಪ್ರೋಮೋ ಪ್ರಕಾರ, ಸುದೀಪ್ ಅವರು ರಜತ್ಗೆ “ಸೇಫ್” ಎಂದು ಘೋಷಿಸಿ, ಡಬಲ್ ಎಲಿಮಿನೇಷನ್ ಇದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿದೆ.
ಮನೆಯ ಹೊರಗೆ ನಡೆದ ಭಾವುಕ ಕ್ಷಣಗಳು
ಪ್ರೋಮೋದಲ್ಲಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಇಬ್ಬರೂ ಮನೆಯ ಸದಸ್ಯರಿಗೆ ಬೈಬೈ ಹೇಳಿ ಮುಖ್ಯದ್ವಾರದಿಂದ ಹೊರಹೋಗುವ ದೃಶ್ಯಗಳು ಕಾಣಿಸಿಕೊಂಡಿವೆ.
ರಕ್ಷಿತಾ ಶೆಟ್ಟಿ ತುಂಬಾ ಭಾವುಕರಾಗಿದ್ದು, ಅಶ್ವಿನಿ ಗೌಡ ಕೂಡ ಕಣ್ಣೀರಿಟ್ಟಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ನಲ್ಲಿ ಇಂತಹ ಎಲಿಮಿನೇಷನ್ ದೃಶ್ಯಗಳನ್ನು ಮುಂಚಿತವಾಗಿ ಪ್ರೋಮೋದಲ್ಲಿ ತೋರಿಸುವುದಿಲ್ಲ.
ಇದನ್ನು ಓದಿ : Yashasvi Jaiswal ಸ್ಫೋಟಕ ಸೆಂಚುರಿ
ನಿಜಕ್ಕೂ ಎಲಿಮಿನೇಷನ್ ಆಗಿದೆಯೇ? ಇಲ್ಲವೇ ಬಿಗ್ ಗೇಮ್?
ಇಲ್ಲಿಯೇ ಇದೆ ದೊಡ್ಡ ಟ್ವಿಸ್ಟ್.
ಈ ವಾರ ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ.ವೋಟಿಂಗ್ ಇಲ್ಲದೇ ಯಾರನ್ನೂ ಎಲಿಮಿನೇಟ್ ಮಾಡುವ ಸಾಧ್ಯತೆಯೇ ಇಲ್ಲ.
ಹೀಗಾಗಿ, ಪ್ರೋಮೋದಲ್ಲಿ ತೋರಿಸಿರುವ ಎಲಿಮಿನೇಷನ್ ನಿಜವಾಗಿಲ್ಲ ಎಂಬ ಅನುಮಾನ ಬಲವಾಗಿದೆ.
ಸೀಕ್ರೆಟ್ ರೂಮ್ಗೆ ಎಂಟ್ರಿಯೇ
ವೀಕ್ಷಕರಲ್ಲಿ ಹರಿದಾಡುತ್ತಿರುವ ಮಾತು ಏನೆಂದರೆ –ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿಲ್ಲ. ಬದಲಾಗಿ ಅವರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಲಾಗಿದೆ.
ಇದು Bigg Boss Kannada 12 secret room twist ಆಗಿರಬಹುದು ಎಂಬ ನಿರೀಕ್ಷೆ ಜೋರಾಗಿದೆ.ಈ ಎಲ್ಲಾ ಗೊಂದಲಗಳಿಗೆ ಉತ್ತರ ಇಂದಿನ (ಡಿ.14) ಎಪಿಸೋಡ್ನಲ್ಲಿ ಸಿಗಲಿದೆ.ವೀಕ್ಷಕರು ಈಗಾಗಲೇ BBK 12 Big Twistಗಾಗಿ ಕಾದು ಕುಳಿತಿದ್ದಾರೆ.
ಇದನ್ನು ನೋಡಿ : ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್




