Bangalore : ಪುಡಿ ರೌಡಿಗಳ ಅಟ್ಟಹಾಸ – ಹಣ, ಮೊಬೈಲ್ ದೋಚಿ ಜನರ ಮೇಲೆ ಹಲ್ಲೆ.!

Bangalore ನಲ್ಲಿ ಪುಡಿ ರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರೇ ಭಯದಿಂದಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಬೆಂಗಳೂರಿನ ಜೆಜೆ ನಗರದಲ್ಲಿ ಗಾಂಜಾ ನಶೆಯಲ್ಲಿ ಬಂದ ಖದೀಮರ ಗ್ಯಾಂಗ್ ವೊಂದು, ಏರಿಯಾದಲ್ಲಿ ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ರಾಬರಿ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಅಟ್ಟಹಾಸ
ಇದೇ ತಿಂಗಳ 5ರಂದು ಜೆಜೆ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಂಜಾ ನಶೆಯಲ್ಲಿದ್ದ ಪುಡಿ ರೌಡಿಗಳ ಗ್ಯಾಂಗ್ ಏರಿಯಾದಲ್ಲಿ ಮಚ್ಚು ಹಿಡಿದು ಎಂಟ್ರಿ ಕೊಟ್ಟಿದೆ. ಬಳಿಕ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ದೇ ಪ್ರಶ್ನೆ ಮಾಡಿದ ಕೆಲವರ ಮೇಲೆ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದು, ಪರಾರಿ ಯಾಗಿದ್ದಾರೆ.
READ THIS : ಜಿಲೆಟಿನ್ ಕಡ್ಡಿ ಪತ್ತೆ ಕೇಸ್ಗೆ ಟ್ವಿಸ್ಟ್ – ಟೈಮರ್ ಇಟ್ಟು ಬ್ಲಾಸ್ಟ್ ಮಾಡಲು ನಡೆದಿತ್ತಾ ಸಂಚು?
ಗಾಂಜಾ ನಶೆಯಲ್ಲಿ ಮಚ್ಚು ಹಿಡಿದು ಪುಂಡರ ದಾಂಧಲೆ
ಇನ್ನು ಆರೋಪಿಗಳ ಈ ದುಷ್ಕೃತ್ಯದ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಕಣ್ಣೆದುರೇ ಮಚ್ಚು ಬೀಸುತ್ತಾ ದಾಂಧಲೆ ನಡೆಸಿದ ಪುಡಿ ರೌಡಿಗಳ ವರ್ತನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಾದ್ರೂ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕೇವಲ ಒಬ್ಬಿಬ್ಬರನ್ನು ಬಂಧಿಸಿ ಪೊಲೀಸರು ಕೈತೊಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
MUST WATCH : TUMAKURಗೆ ಕಾದಿದ್ಯಾ ಜಲ ಕಂಟಕ..?! ನೀರು ಬಿಡದಂತೆ ಮಾಡ್ತಿದ್ದಾರಾ DKS..?




