Bengaluru : ಜಿಲೆಟಿನ್ ಕಡ್ಡಿ ಮಾತ್ರವಲ್ಲ, ಮೋದಿ ಮಾರ್ಗದಲ್ಲಿ ಸಿಕ್ಕಿದ್ದು ಸ್ಪೋಟಕ!

Bengaluru : ಪ್ರಧಾನಿ ನರೇಂದ್ರ ಮೋದಿ ತೆರಳಿದ ಮಾರ್ಗದಲ್ಲೇ ಪತ್ತೆಯಾದ ಜಿಲೆಟಿನ್ ಕಡ್ಡಿ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಜಿಲೆಟಿನ್ ಕಡ್ಡಿ ಜೊತೆಗೆ ಸ್ಫೋಟಕ ಕೂಡ ಸಿಕ್ಕದೆ ಎನ್ನುವ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಪಕ್ಕಾ ಪ್ಲಾನ್ ಮಾಡಿಯೇ ಟೈಮರ್ ಇಟ್ಟು ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದ್ದು, ಸ್ಪೋಟಕಕ್ಕೆ ಬೇಕಾದ ವಸ್ತುಗಳನ್ನ ದುಷ್ಕರ್ಮಿಗಳು ಬಾಕ್ಸ್ನಲ್ಲಿ ಇಟ್ಟಿದ್ದರು ಎನ್ನಲಾಗ್ತಿದೆ.
ಮೋದಿ ಮಾರ್ಗದಲ್ಲಿ ಸಿಕ್ಕಿದ್ದು ಸ್ಪೋಟಕ!
ಜಿಲೆಟಿನ್ ಕಡ್ಡಿ ಇದ್ದ ಬಾಕ್ಸ್ನಲ್ಲಿ ಬ್ಲಾಸ್ಟ್ಗೆ ಬೇಕಾದ ಸರ್ಕ್ಯೂಟ್ ಪತ್ತೆಯಾಗಿದೆ. ಬಾಕ್ಸ್ನಲ್ಲಿ ಟೈಮರ್ ಅಂಡ್ ಡೇಟ್ ಸೆಟ್ ಫಿಕ್ಸ್ ಮಾಡಲು ಸಿದ್ದತೆ ನಡೆಸಿದ್ದರು ಎನ್ನಲಾಗ್ತಿದೆ. ಡೆಟೊನೇಟರ್ ಜೋಡಿಸಿ ಸಮಯ ನಿಗದಿಪಡಿಸಿದ್ದರೆ ಸ್ಫೋಟ ಸಂಭವಿಸಬಹುದಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪತ್ತೆಯಾಗಿರುವ ಸ್ಫೋಟಕ ವಸ್ತುಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಎಲ್ಲವನ್ನೂ ಪೊಲೀಸರು ಎಫ್ಎಸ್ಎಲ್ಗೆ ಕಳಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರೀ-ಪ್ಲಾನ್ ಸ್ಫೋಟ ಯತ್ನವೇ?
ಇನ್ನು ಪ್ರಕರಣವು ಈಗ ಬೆಂಗಳೂರು ದಕ್ಷಿಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಷ್ಟು ಸೂಕ್ಷ್ಮವಾಗಿ ಸ್ಫೋಟಕ ವಸ್ತುಗಳನ್ನು ವ್ಯವಸ್ಥೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆರೋಪಿಗಳು ಪೂರ್ವಯೋಜಿತವಾಗಿ ಸಂಚು ರೂಪಿಸಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇದಲ್ಲದೆ, ಪ್ರಧಾನಿ ಸಂಚರಿಸಿದ ರಸ್ತೆಯಿಂದ ಕೇವಲ 50 ರಿಂದ 100 ಮೀಟರ್ ಅಂತರದಲ್ಲೇ ಈ ಬಾಕ್ಸ್ ಪತ್ತೆಯಾಗಿರುವುದು ಭದ್ರತಾ ವೈಫಲ್ಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿ ಭದ್ರತಾ ಮಾರ್ಗದಲ್ಲಿ ಇಂತಹ ವಸ್ತುಗಳು ಪತ್ತೆಯಾಗಿದ್ದು ಹೇಗೆ ಎಂಬುದರ ಕುರಿತು ಪ್ರತ್ಯೇಕ ತನಿಖೆ ನಡೆಯುತ್ತಿದೆ.

READ THIS : ಬಾಟಲಿ, ಕ್ಯಾನ್ಗಳಲ್ಲಿ ಪೆಟ್ರೋಲ್,ಡೀಸೆಲ್ ಮಾರಾಟಕ್ಕೆ ಬ್ರೇಕ್!
ಎನ್ಐಎ ತಂಡದಿಂದ ಪರಿಶೀಲನೆ
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಕಲೆಹಾಕಿದೆ. ಕಳೆದ ಮೂರು ದಿನಗಳಿಂದ ಎನ್ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ತಂಗಿದ್ದು ತನಿಖೆ ಮುಂದುವರಿಸಿದ್ದಾರೆ.
ಎನ್ಐಎ ಮೂಲಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ್ಕಿಂತ ಹೆಚ್ಚು ಬೆದರಿಕೆಅಥವಾ ಎಚ್ಚರಿಕೆ ಸಂದೇಶ ರವಾನಿಸುವ ಉದ್ದೇಶ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಐಇಡಿ ಮಾದರಿಯ ವ್ಯವಸ್ಥೆ ಇಟ್ಟಿದ್ದರೂ, ಟೈಮರ್ ಸೆಟ್ಟಿಂಗ್ ಮಾಡದೇ ಹಾಗೂ ಸಂಪರ್ಕಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಇದರಿಂದ ತಕ್ಷಣದ ಸ್ಫೋಟ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.

ಎನ್ಐಎಗೆ ವರ್ಗಾವಣೆ ಮಾಡೋ ಸಾಧ್ಯತೆ
ಸ್ಫೋಟಕ ವಸ್ತುಗಳು ಪತ್ತೆಯಾದ ಸ್ಥಳ ಖಾಸಗಿ ಜಾಗವಾಗಿದ್ದು, ಕಾಂಪೌಂಡ್ ಒಳಗೆ ಪೊದೆಗಳು ಹಾಗೂ ಸಮೀಪದಲ್ಲೇ ಕೆರೆ ಇರುವುದರಿಂದ, ಆರೋಪಿಗಳು ಹಿಂಬದಿಯ ಮಾರ್ಗದಿಂದ ಬಂದು ಬಾಕ್ಸ್ ಇಟ್ಟು ಪರಾರಿಯಾಗಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇನ್ನು ಈ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
MUST WATCH : ಜೂಜು ಅಡ್ಡೆ ಮೇಲೆ POLICE RAID ಲಕ್ಷಾಂತರ ಮೌಲ್ಯದ ವಸ್ತು ಸೀಜ್




