Chikkabanavara|ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರು ಆರೋಪಿಗಳ ಬಂಧನ

ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಗ್ಯಾಂಗನ್ನು ಬೇಧಿಸಿರುವ ಸಿಸಿಬಿ ಹಾಗೂ Chikkabanavara ಪೊಲೀಸರು ಮೂವರನ್ನು ಬಂಧಿಸಿ 10 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನಿತರ ಆರೋಪಿಗಳ ಬಂಧನಕ್ಕೆ ಶೋಧ
ಮೂಡಲಪಾಳ್ಯದ ಸಂಜೀವಿನಿ ನಗರದಮುರುಳಿ (29), ಮಾರೇನಹಳ್ಳಿಯ ಮಂಜುನಾಥ್ (39) ಹಾಗೂ ಚಿಕ್ಕಸಂದ್ರದ ಹನುಮಂತೇಗೌಡ ಲೇಔಟ್ನ ಕಾರ್ಯಪ್ಪ (53) ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಇನ್ನಿತರರು ಕೂಡ ಭಾಗಿಯಾಗಿರುವ ಶಂಕೆಯಿದ್ದು, ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

READ THIS : ಜಿಲೆಟಿನ್ ಕಡ್ಡಿ ಪತ್ತೆ ಕೇಸ್ಗೆ ಟ್ವಿಸ್ಟ್ – ಟೈಮರ್ ಇಟ್ಟು ಬ್ಲಾಸ್ಟ್ ಮಾಡಲು ನಡೆದಿತ್ತಾ ಸಂಚು?
10 ಲಕ್ಷ ಮೌಲ್ಯದ 1 ಜಿಂಕೆ ಕೊಂಬುಗಳು ವಶ
ಇನ್ನು ಬಂಧಿತರಿಂದ 10 ಲಕ್ಷ ಮೌಲ್ಯದ 1 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೃತ್ಯ – Chikkabanavara
ಚಿಕ್ಕಬಾಣಾವರದ ಕಾಲೇಜು ಸಮೀಪ ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಒಂದು ಜಿಂಕೆಯ ಕೊಂಬಿನ ಸಮೇತ ಬಂಧಿಸಲಾಗಿದೆ. ಹಣ ಗಳಿಸುವ ಉದ್ದೇಶದಿಂದ ಈ ಅಕ್ರಮ ವ್ಯಾಪಾರ ನಡೆಸುತ್ತಿದ್ದೇವೆ ಎಂದು ಆರೋಪಿಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಕಾರ್ಯಾಚರಣೆಯನ್ನು ಡಿಸಿಪಿ ಶ್ರೀಹರಿ ಬಾಬುನೇತೃತ್ವದ ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ ವಿಭಾಗ), ಇನ್ಸ್ಪೆಕ್ಟರ್ ಸುರೇಶ್ ಪಿ ಹಾಗೂ ಚಿಕ್ಕಬಾಣಾವರ ಪೊಲೀಸ್ ಠಾಣೆ ಪಿಎಸ್ಐ ಸಾಗರ್ ಅವರ ತಂಡ ಜಂಟಿಯಾಗಿ ನಡೆಸಿದೆ.
MUST WATCH : ಕ್ಷುಲ್ಲಕ ವಿಚಾರಕ್ಕೆ ಐದಾರು ಮಂದಿಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ..!





