Theft : ದೇವಸ್ಥಾನದಲ್ಲಿ ತ್ರಿಶೂಲದಿಂದ ಹುಂಡಿ ಒಡೆದು ಕಳ್ಳತನ.!

ಬೆಂಗಳೂರಿನ ಇಂದಿರಾನಗರ ಠಾಣಾ ವ್ಯಾಪ್ತಿಯ ಅಯ್ಯನರೆಡ್ಡಿ ಪಾಳ್ಯದಲ್ಲಿರುವ ಮುನೇಶ್ವರನ ದೇವಸ್ಥಾನದಲ್ಲಿ ಕಳ್ಳನೋರ್ವ ದೇವರ ಮುಂದಿದ್ದ ತ್ರಿಶೂಲ ಬಳಸಿ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ದೇವರ ತ್ರಿಶೂಲದಿಂದಲೇ ಹುಂಡಿ ಒಡೆದು ಕಳ್ಳತನ.!
ನೆನ್ನೆ (ಮೇ 13) ಮುಂಜಾನೆ 2 ಗಂಟೆ ಸುಮಾರಿಗೆ ಸಿಂಗಲ್ ಆಗಿ ದೇವಸ್ಥಾನಕ್ಕೆ ಎಂಟ್ರಿಕೊಟ್ಟ ಖದೀಮ, ಹುಂಡಿಯನ್ನ ಒಡೆಯಲು ಯತ್ನಿಸಿದ್ದಾನೆ. ಆದ್ರೆ ಹುಂಡಿ ಒಡೆಯಲು ಸಾಧ್ಯವಾಗದೇ ಇದ್ದಾಗ ದೇವರ ಮುಂದಿದ್ದ ತ್ರಿಶೂಲವನ್ನೇ ಕಿತ್ತುಕೊಂಡು ಅದರಿಂದ ಹುಂಡಿ ಒಡೆದು ಅದರ ಒಳಗಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
READ THIS : ಬೆಂಗಳೂರು ಜನರಿಗೆ ಜಲಮಂಡಳಿ ಬಿಗ್ ಶಾಕ್..!

Theft – ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಮುಂಜಾನೆ ದೇವಸ್ಥಾನಕ್ಕೆ ಬಂದ ಅರ್ಚಕರು ಹುಂಡಿ ಒಡೆದಿರುವುದು ಗಮನಿಸಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ದೇವಸ್ಥಾನದ ಟ್ರಸ್ಟಿಗಳು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

MUST WATCH : INFLUENCER BLACKMAIL CASEಗೆ TWIST – ಗಂಡನ ಕಳ್ಳಾಟ ಬಯಲಿಗೆಳೆದ ಪತ್ನಿ..!




