ಸದ್ದಿಲ್ಲದೇ ಜಲಮಂಡಳಿಯಿಂದ ನೀರಿನ ದರ ಏರಿಕೆ – ನೀರಿನ ಬಿಲ್ ನೋಡಿ Bangalore ಜನರು ಶಾಕ್.!

ಸಿಲಿಕಾನ್ ಸಿಟಿ Bangalore ನಲ್ಲಿ ಬೋರ್ವೆಲ್ ಇಲ್ಲದ ಮನೆಗಳಿಗೂ ಬೋರ್ವೆಲ್ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಬೆಂಗಳೂರು ಜಲಮಂಡಳಿಯ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕ್ತಿದ್ದಾರೆ.

BWSSB ನಡೆಗೆ ಸಾರ್ವಜನಿಕರು ಅಸಮಾಧಾನ
ಹೌದು, ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ನೀರಿನ ಶುಲ್ಕ ವಿಧಿಸುತ್ತಿದೆ ಎನ್ನುವ ಆರೋಪದ ನಡುವೆ, ಇದೀಗ BWSSB ಬಿಲ್ನಲ್ಲಿ ಹೆಚ್ಚುವರಿ ಶುಲ್ಕಗಳನ್ನು ಸೇರಿಸುತ್ತಿದೆ ಎನ್ನಲಾಗ್ತಿದೆ. ಬೋರ್ವೆಲ್ ಇಲ್ಲದ ಮನೆಗಳಿಗೆ ಮಾತ್ರವಲ್ಲದೇ, ಬೋರ್ವೆಲ್ ಬತ್ತಿಹೋಗಿರುವ ಮನೆಗಳಿಗೂ ಬೋರ್ವೆಲ್ ವೆಚ್ಚ ಹೆಸರಿನಲ್ಲಿ ಶುಲ್ಕ ವಿಧಿಸಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೀಟರ್ಗೆ ಹಣ ಪಾವತಿಸಿದ್ರೂ, ಬಿಲ್ನಲ್ಲಿ ಮತ್ತೆ ಮಾಪಕ ವೆಚ್ಚ ಹೆಸರಿನಲ್ಲಿ ಶುಲ್ಕ ಸೇರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

READ THIS : Parappana Agrahara ಜೈಲಿನಲ್ಲಿ ಮತ್ತೆ ಮೊಬೈಲ್, ಸಿಮ್ ಕಾರ್ಡ್ ಪತ್ತೆ!
ನೀರಿನ ಬಿಲ್ ನೋಡಿ ಶಾಕ್..!
ಇನ್ನು ಶುಲ್ಕ ಹೆಚ್ಚಳವನ್ನು ನೇರವಾಗಿ ಘೋಷಣೆ ಮಾಡದೇ, ಬೇರೆ ಬೇರೆ ಹೆಸರಿನಲ್ಲಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎನ್ನಲಾಗ್ತಿದೆ. ಅಲ್ದೇ 31 ಸಾವಿರ ಲೀಟರ್ ನೀರಿನ ಬಳಕೆಗೆ ಬರೋಬ್ಬರಿ 913 ರೂಪಾಯಿ ಬಿಲ್ ವಿಧಿಸಲಾಗಿದ್ದು, ಅದರಲ್ಲಿ ನೀರಿನ ಶುಲ್ಕ 525 ರೂಪಾಯಿ, ಮಾಪಕ ವೆಚ್ಚ 75 ರೂಪಾಯಿ, ಒಳಚರಂಡಿ ವೆಚ್ಚ 263 ರೂಪಾಯಿ ಹಾಗೂ ಬೋರ್ವೆಲ್ ವೆಚ್ಚ 50 ರೂಪಾಯಿ ಸೇರಿಸಲಾಗಿದೆ ಎನ್ನಲಾಗಿದೆ.

ನೀರಿನಬಿಲ್ ಹೆಸರಿನಲ್ಲಿ ಹಗಲು ದರೋಡೆ ಆರೋಪ
ಇನ್ನು ಈ ಬಿಲ್ ವಿವರಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಿದ್ದು, ಇದು ನೀರಿನ ಬಿಲ್ ಅಲ್ಲ ಹಗಲು ದರೋಡೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಜಲಮಂಡಳಿ ಅಧಿಕಾರಿಗಳ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಅನಗತ್ಯ ಶುಲ್ಕಗಳನ್ನ ಹಿಂಪಡೆದು ಜನರಿಗೆ ನ್ಯಾಯ ಒದಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

MUST WATCH : BAKERY ತಿಂಡಿ ತಿನ್ನೋ ಮುನ್ನ ಈ ಸ್ಟೋರಿ ನೋಡಿ – ಎಷ್ಟು HYGIENE ಆಗಿ ಮಾಡ್ತಾರೆ ಚೆಕ್ ಮಾಡಿ?




