Parappana Agrahara ಜೈಲಿನಲ್ಲಿ ಮತ್ತೆ ಮೊಬೈಲ್ ಸದ್ದು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತಿಲ್ಲ. ಹಲವು ಶಿಸ್ತು ಕ್ರಮಗಳನ್ನು ಕೈಗೊಂಡರು ಕೈದಿಗಳ ಕೈಗೆ ಮೊಬೈಲ್ ಸಿಗುವ ಅವಕಾಶಗಳಿಗೆ ಕಡಿವಾಣ ಹಾಕಲು ಹಾಕ್ತಿಲ್ಲ. ಇದೀಗ ಮತ್ತೆ ಜೈಲಿನಲ್ಲಿ ಮೊಬೈಲ್ ಹಾಗೂ ಸೀಮ್ ಕಾರ್ಡ್ ಪತ್ತೆಯಾಗಿದೆ.
ನಿಷೇಧಿತ ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು ಪತ್ತೆ!
ಯೆಸ್.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಳಿ ಮತ್ತೆ ನಿಷೇಧಿತ ಮೊಬೈಲ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳು ಪತ್ತೆಯಾಗಿದೆ. ಜೈಲಿನ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯ ವೇಳೆ ವಿವಿಧ ಕಂಪನಿಗಳ ಮೂರು ಮೊಬೈಲ್ಗಳು ಹಾಗೂ ಸೀಮ್ ಕಾರ್ಡ್ಗಳು ಪತ್ತೆಯಾಗಿದ್ದು, ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

READ THIS : ಪ್ರೀತಿಗೆ ಪೋಷಕರು ನೋ ಅಂದಿದ್ದಕ್ಕೆ ಯುವಕ ಆತ್ಮಹತ್ಯೆ!
ಜೈಲಿನ 10,13, 16 ರಲ್ಲಿ ಮೊಬೈಲ್ ಪತ್ತೆ
ಇನ್ನು ಮಾಹಿತಿಯ ಪ್ರಕಾರ ಜೈಲಿನ 10, 13 ಹಾಗೂ 16ನೇ ಕೊಠಡಿಗಳಲ್ಲಿ ಮೊಬೈಲ್ಗಳು ಪತ್ತೆಯಾಗಿವೆ. ಮೇ 12ರಂದು ರಾತ್ರಿ ಸುಮಾರು 7.45ರ ವೇಳೆ ಜೈಲು ಅಧಿಕಾರಿಗಳು ತಪಾಸಣೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಕಳೆದ 12 ನೇ ತಾರೀಖಿನಂದು ರಾತ್ರಿ 7.45 ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಕೂಡ ಮೊಬೈಲ್ ಪತ್ತೆಯಾಗಿತ್ತು.
ದೂರಿನ ಮೇರೆಗೆ FIR ದಾಖಲು
ಕೈದಿಗಳಿಗೆ ಈ ಮೊಬೈಲ್ ತಲುಪಿಸಲು ಸಹಕರಿಸಿದವರು ಯಾರು ಎಂಬ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಜೈಲು ಸೂಪರಿಂಡೆಂಟ್ ಬಿ.ಆರ್. ಅದಾನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚರ್ಚೆಗೆ ಗ್ರಾಸ
ಇತ್ತೀಚಿನ ದಿನಗಳಲ್ಲಿ ಸರಣಿ ದಾಳಿಗಳು ನಡೆಯುತ್ತಿದ್ದರೂ Parappana Agrahara ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಮುಂದುವರಿಯುತ್ತಿ ರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
MUST WATCH : ಶಾಸಕರೇ,ಅಧಿಕಾರಿಗಳೇ ಎಲ್ಲಿದ್ದೀರಿ ಸ್ವಾಮಿ.?! ಇಲ್ಲಿರೊರಿಗೆ ರಸ್ತೆ, ಕರೆಂಟ್ ಇಲ್ಲ, ನೀರು ಇಲ್ವೇ ಇಲ್ಲ





