ಪ್ರೀತಿಗೆ ಪೋಷಕರ ವಿರೋಧ – ನೇಣು ಬಿಗಿದುಕೊಂಡು ಯುವಕ Suicide.

ಪ್ರೀತಿ ವಿಚಾರದಲ್ಲಿ ಯುವಕ-ಯುವತಿಯರು ದುಡುಕಿನ ನಿರ್ಧಾರ ತೆಗೆದುಕೊಂಡು ಜೀವ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಈಗ ಅಂಥಹದ್ದೇ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ.

ಅನ್ಯಜಾತಿ ಯುವತಿಯೊಂದಿಗೆ ಲವ್
ಹೌದು.. ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಕೊಡಲು ಪೋಷಕರು ನೋ ಎಂದಿದ್ದಕ್ಕೆ ಮನನೊಂದ ಯುವಕನೊರ್ವ Suicide ಮಾಡಿಕೊಂಡಿರುವ ದಾರುಣ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
READ THIS : ಅದೊಂದು ಎಡವಟ್ಟು ದಿಲೀಪ್ ರಾಜ್ ಸಾವಿಗೆ ಕಾರಣವಾಯ್ತಾ?

ಪೋಷಕರ ವಿರೋಧಕ್ಕೆ ಬಲಿಯಾದ ಪ್ರೇಮ ಕಥೆ
ಮೃತ ಯುವಕನನ್ನು 25 ವರ್ಷದ ರಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಜಕ್ಕೂರಿನ ಶ್ರೀರಾಂಪುರ ನಿವಾಸಿಯಾಗಿದ್ದ ರಾಮ್ ಕುಮಾರ್ ಅನ್ಯಜಾತಿಯ ಯುವತಿಯನ್ನು ಲವ್ ಮಾಡುತ್ತಿದ್ದ. ಆಕೆಯನ್ನೇ ಮದುವೆಯಾಗ್ಬೇಕು ಅಂತ ಮನೆಯವರ ಬಳಿ ಹೇಳಿದ್ದ. ಆದ್ರೆ ಪೋಷಕರು ಮಗನ ಪ್ರೀತಿ ಒಪ್ಪಿಲ್ಲ, ಮದುವೆ ನಿರಾಕರಿಸಿದ್ದಾರೆ. ಎಷ್ಟೇ ಹೇಳಿದ್ರು ಒಪ್ಪದ ಪೋಷಕರ ನಡೆಗೆ ಬೇಸತ್ತ ಯುವಕ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Suicide – ಅಮೃತಹಳ್ಳಿ ಪೊಲೀಸರಿಂದ ತನಿಖೆ
ಇನ್ನು ಪೋಷಕರು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

MUST WATCH : ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲುಗೆ ಬ್ರೇಕ್ – ಹಿಜಾಬ್ ಧರಿಸಲು ಪರ್ಮಿಷನ್ ಕೊಟ್ಟ ಸರ್ಕಾರ




