ನಟ, ನಿರ್ದೇಶಕ, ನಿರ್ಮಾಪಕ Dileep Raj ಇನ್ನಿಲ್ಲ – ಯಾವ್ಯಾವ ಸಿನಿಮಾ, ಸಿರೀಯಲ್ ಮಾಡಿದ್ರು?

ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಕೊನೆಯುಸಿರು ಎಳೆದಿದ್ದು, ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್ ಆಗಿದೆ. ಚಿಕ್ಕ ವಯಸ್ಸಿನ ದಿಲೀಪ್ ರಾಜ್ ಬಾಳಲ್ಲಿ ವಿಧಿ ಅಟ್ಟಹಾಸ ಮೆರೆದಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 47 ವರ್ಷದ ದಿಲೀಪ್ ರಾಜ್ ನಿಧನದಿಂದ ಕನ್ನಡ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ.

ಹೃದಯಾಘಾತದಿಂದ ಸಾವನ್ನಪ್ಪಿದ ನಟ
ನಟ ದಿಲೀಪ್ ರಾಜ್ ಮನೆಯಲ್ಲಿ ಇದ್ದಾಗಲೇ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ಆದ್ರೆ ವಿಧಿಯ ಕ್ರೂರತೆಗೆ ದಿಲೀಪ್ ರಾಜ್ ಸಾವನ್ನಪ್ಪಿದ್ರು. ದಿಲೀಪ್ ರಾಜ್ ನಿಧನದಿಂದ ಸ್ಯಾಂಡಲ್ ವುಡ್ ಗೆ ಬರಸಿಡಿಲು ಬಡಿದಂತಾಗಿದೆ.

ಯಾವ್ಯಾವ ಸಿನಿಮಾ, ಸಿರೀಯಲ್ ಮಾಡಿದ್ರು?
ಅರಸೀಕೆರೆ ಮೂಲದವರಾದ ದಿಲೀಪ್ ರಾಜ್, ಚಿಕ್ಕ ವಯಸ್ಸಿಗೆ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ರು. ಆರಂಭದಲ್ಲಿ ನಟರಾಗಿದ್ದ ದಿಲೀಪ್, ನಂತರದಲ್ಲಿ ನಿರ್ದೇಶನ, ನಿರ್ಮಾಪಕ ಸಾಹಸಕ್ಕೂ ಕೈ ಹಾಕಿದ್ರು.
ಮಿಲನ, ಯು ಟರ್ನ್, ಬಾಯ್ ಫ್ರೆಂಡ್, ಅಂಬಿ ನಿಂಗೆ ವಯಸ್ಸಾಯ್ತೊ, ಟೋನಿ, ಬರ್ಫಿ, ಬೈರವಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಅಲ್ದೇ ಹಿಟ್ಲರ್ ಕಲ್ಯಾಣ ಸಿರೀಯಲ್ ನಲ್ಲಿ ಮೈನ್ ರೋಲ್ ನಲ್ಲಿ ನಟಿಸಿದ್ದ ದಿಲೀಪ್ ರಾಜ್ ಸಾಕಷ್ಟು ಜಮಪ್ರಿಯತೆಯನ್ನು ಗಳಿಸಿದ್ದರು. ಬಳಿಕ ಪಾರು, ನಾ ನಿನ್ನ ಬಿಡಲಾರೆ ಧಾರಾವಾಹಿಗಳನ್ನು ದಿಲೀಪ್ ನಿರ್ಮಾಣ ಮಾಡಿದ್ದರು.

ಕನ್ನಡ ಚಿತ್ರರಂಗಕ್ಕೆ ಶಾಕ್!
ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟ Dileep Raj ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಕೋಟ್ಯಾಂತರ ಮಂದಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಅದೊಂದು ಎಡವಟ್ಟು Dileep Raj ಸಾವಿಗೆ ಕಾರಣವಾಯ್ತಾ?
ಇನ್ನು ದಿಲೀಪ್ ರಾಜ್ ಕೆಲ ದಿನಗಳ ಹಿಂದೆಷ್ಟೇ ಗೋವಾಗೆ ತೆರಳಿದ್ರು. ಗೋವಾದಲ್ಲಿ ಮಸ್ತಿ ಮಾಡುವಾಗಲೇ ಹೃದಯ ನೋವಿನ ಬಗ್ಗೆ ಸೂಚನೆ ನೀಡಿತ್ತು ಎನ್ನಲಾಗ್ತಿದೆ. ಆದರೆ ದಿಲೀಪ್ ಕೇರ್ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.
ಗೋವಾ ಟ್ರಿಪ್ ಮಾಡ್ತಿದ್ದಾಗಲೇ ದಿಲೀಪ್ ರಾಜ್ಗೆ ಆಗಾಗ ನೋವು ಕಾಣಿಸಿಕೊಂಡಿದೆ ಅಂದೇ ಅನುಮಾನ ಮೂಡಿತ್ತು, ಬಳಿಕ ಬೆಂಗಳೂರಿಗೆ ತೆರಳಿದ ಬಳಿಕ ತಪಾಸಣೆಗೂ ಮುಂದಾಗಿದ್ದರು ಅಷ್ಟರಲ್ಲೇ ಏಕಾಏಕಿ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ.

MUST WATCH : PETROL, DIESEL ಗೆ ಹೊಸ RULES ಜಾರಿ – ನಿಯಮ ಮೀರಿದ್ರೆ ಕಠಿಣ ಕಾನೂನು ಕ್ರಮ




