ಕಾಂಗ್ರೆಸ್ ನಾಯಕಿ Sonia Gandhi ಮತ್ತೆ ಆಸ್ಪತ್ರೆಗೆ ದಾಖಲು.

79 ವರ್ಷದ ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದು ಗುರುಗಾಂವ್ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕಿಗೆ ಏನಾಯ್ತು?
ಎಐಸಿಸಿ ಮಾಜಿ ಅಧ್ಯಕ್ಷೆಯಾಗಿರುವ Sonia Gandhi ಅವರು ಆಸ್ಪತ್ರೆಯಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ, ಈ ಕುರಿತು ಆಸ್ಪತ್ರೆ ಆಡಳಿತದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಹಿಂದೆ ದೆಹಲಿಯ ಗಂಗಾ ರಾಮ್ ಆಸ್ಪತ್ರೆ ದಾಖಲಾಗಿದ್ರು
ಈ ಹಿಂದೆ ಮಾರ್ಚ್ 2026ರಲ್ಲಿ ಸೋನಿಯಾ ಗಾಂಧಿ ಉಸಿರಾಟದ ಸಮಸ್ಯೆಯಿಂದ ದೆಹಲಿಯ ಗಂಗಾ ರಾಮ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇಬ್ಬರು ಆಸ್ಪತ್ರೆಯಲ್ಲಿ ತಾಯಿ ಆರೈಕೆ ಮಾಡಿದ್ದರು.
READ THIS : ಅದೊಂದು ಎಡವಟ್ಟು ದಿಲೀಪ್ ರಾಜ್ ಸಾವಿಗೆ ಕಾರಣವಾಯ್ತಾ?

Sonia Gandhi – ಈ ವರ್ಷ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲು
ಇನ್ನು ಜನವರಿ ತಿಂಗಳಲ್ಲಿ ಸಣ್ಣ ಪ್ರಮಾಣದ ಬ್ರೊಂಕೈಲ್ ಅಸ್ತಮಾ ಸಮಸ್ಯೆಯಿಂದ ಬಳಲಿದ್ದರು. ದೆಹಲಿಯ ವಿಪರೀತ ವಾಯುಮಾಲಿನ್ಯ ಸಮಸ್ಯೆಯಿಂದ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಈ ವೇಳೆ ದೆಹಲಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಲೋಕಸಭೆಯಲ್ಲಿ ಐದು ಬಾರಿ ಸಂಸದೆಯಾಗಿದ್ದ ಬಳಿಕ ರಾಜ್ಯಸಭೆಗೆ ಬಂದ ಸೋನಿಯಾ ಗಾಂಧಿ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ.

MUST WATCH : KDP ಸಭೆಯಲ್ಲಿ ಮೊಬೈಲ್ ನಲ್ಲೇ ಮುಳುಗಿದ ಅಧಿಕಾರಿ – ಸಭೆಯಲ್ಲಿ ಮಹಿಳೆ PHOTO ನೋಡೊದ್ರಲ್ಲಿ ಅಧಿಕಾರಿ ಮಗ್ನ..!




