
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಮೇಶ್ ಮೇಟಿ (ಬಾಗಲಕೋಟೆ) ಹಾಗೂ ಸಮರ್ಥ್ ಶಾಮನೂರು (ದಾವಣಗೆರೆ ದಕ್ಷಿಣ) ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

REDA THIS : ಮುನೇಶ್ವರ ದೇವಸ್ಥಾನದಲ್ಲಿ ತ್ರಿಶೂಲದಿಂದ ಹುಂಡಿ ಹೊಡೆದು ಕಳ್ಳತನ!
ಯು.ಟಿ. ಖಾದರ್ ಪ್ರತಿಜ್ಞಾ ವಿಧಿ ಬೋಧನೆ
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ನೂತನ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಸ್ವೀಕಾರ ನೆರವೇರಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ಅವರು ಸದನದ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಅಧಿಕೃತವಾಗಿ ಅರ್ಹತೆ ಪಡೆದರು.
ಹಲವು ಗಣ್ಯರು ಉಪಸ್ಥಿತ
ಈ ಮಹತ್ವದ ಕ್ಷಣಕ್ಕೆ ರಾಜ್ಯ ರಾಜಕಾರಣದ ಹಲವು ಗಣ್ಯರು ಸಾಕ್ಷಿಯಾದರು. ವೇದಿಕೆಯ ಮೇಲೆ ಸಚಿವ ಸತೀಶ್ ಜಾರಕಿಹೊಳಿ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಹಾಗೂ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿಧಾನಸಭಾ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಕಾರ್ಯಕ್ರಮದ ನಿರ್ವಹಣೆ ನಡೆಸಿದರು.

ನೂತನ ಶಾಸಕರ ಬೆಂಬಲಿಗರು ಹಾಗೂ ಕುಟುಂಬಸ್ಥರು ಈ ಸಂದರ್ಭದಲ್ಲಿ ಸಂಭ್ರಮ ವ್ಯಕ್ತಪಡಿಸಿದರು.
MUST WATCH : ಸಚಿವರ ಮಗ ಅಂತಾ ಹೇಳಿ ಯಾಮಾರಿಸಿದ – ಮದುವೆ ಮಂಟಪದಲ್ಲೇ ಕಿರಾತಕ ಲಾಕ್




